ನಂದಿ ಧ್ವಜಾರೋಹಣ ಮೂಲಕ ತೀರ್ಥಹಳ್ಳಿಯ ಎಳ್ಳಮವಾಸ್ಯೆ ಜಾತ್ರೆಗೆ ಚಾಲನೆ
ತೀರ್ಥಹಳ್ಳಿ : ಮೊದಲನೇ ದಿವಸ ದೇವರಿಗೆ ಫಲನ್ಯಾಸ, ಪುಣ್ಯಾಹ, ದೇವಾನಾಂದಿ, ವೃಷಾಧಿವಾಸ ಹೋಮದ ನಂತರ ಧ್ವಜಾರೋಹಣ ಮಾಡಿದ್ದೇವೆ. ಸಂಜೆ ಕೂಡ ಹೋಮ ಹವನಗಳು ನಡೆಯಲಿವೆ. ಈ ವೇಳೆ ಅನೇಕ ಋತ್ವಿಜರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ತಂತ್ರಿಗಳಾದ ಲಕ್ಷ್ಮೀಶ ತಂತ್ರಿಗಳು ತಿಳಿಸಿದರು.
ರಾಮೇಶ್ವರ ದೇವಸ್ಥಾನದಲ್ಲಿ ನಂದಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಐದು ದಿನ ಪರ್ಯಂತ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಇಂದು ನಾವು ವೃಷಭನನ್ನು ಕಟ್ಟಿದರು ಸಹ ಗರುಡನ ಕಟ್ಟುವುದು ಎಂದು ಹೇಳುತ್ತಾರೆ. ಅದೊಂದು ಪ್ರತಿತಿ. ದೇವರ ಬಗ್ಗೆ ನಂಬಿಕೆ ಇರುವುದರಿಂದ ಇಂತಹ ಪವಾಡಗಳು ನಡೆಯುತ್ತವೆ ಎಂದು ತಿಳಿಸಿದರು.
ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮ
ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿ ಪ್ರತಿವರ್ಷ ಲಕ್ಷಾಂತರ ಜನರು ಈ ಜಾತ್ರೆಗೆ ಹೊರ ಊರುಗಳಿಂದಲೂ ಆಗಮಿಸುತ್ತಾರೆ. ಮೂರು ದಿನಗಳ ಕಾಲ ಅಂದರೆ, ಡಿಸೇಂಬರ್ 19 ರಂದು ತೀರ್ಥಸ್ನಾನ, ಡಿಸೇಂಬರ್ 20 ರಂದು ರಥೋತ್ಸವ, ಡಿಸೇಂಬರ್ 21ರಂದು ತೆಪ್ಪೋತ್ಸವ ಹಾಗೂ ಈ ಬಾರಿ ಒಟ್ಟು ಏಳು ದಿನಗಳ ಕಾಲ ಅನ್ನ ಸಂತರ್ಪಣೆ ಕೂಡ ನಡೆಯಲಿದೆ.
ಗರುಡ ದರ್ಶನ
ನಂದಿ ಧ್ವಜಾರೋಹಣ ಸಂದರ್ಭದಲ್ಲಿ ಆಕಾಶದಲ್ಲಿ ಗರುಡನ ದರ್ಶನ ಆಯಿತು. ಇದನ್ನು ಭಕ್ತಾದಿಗಳು ನೋಡಿ ಸಂಭ್ರಮ ಪಟ್ಟರು. ಪ್ರತಿ ವರ್ಷ ನಂದಿ ಧ್ವಜಾರೋಹಣ ಹಾಗೂ ರಥಾರೋಹಣ ವೇಳೆ ಗರುಡ ದರ್ಶನ ಆಗುತ್ತದೆ. ಅದೊಂದು ನಂಬಿಕೆ ಜೊತೆಗೆ ಪವಾಡ ಸಹ ಹೌದು..
Tags:
ಜಾತ್ರೆ ಸುದ್ದಿ