ಎಲೆಚುಕ್ಕೆ ರೋಗ ಉಲ್ಬಣ - ಹಣ ಬಿಡುಗಡೆ ಮಾಡಲು ಆರಗ ಜ್ಞಾನೇಂದ್ರ ಮನವಿ Araga jnanendra

ಎಲೆಚುಕ್ಕೆ ರೋಗ ಉಲ್ಬಣ - ಹಣ ಬಿಡುಗಡೆ ಮಾಡಲು ಆರಗ ಜ್ಞಾನೇಂದ್ರ ಮನವಿ

ತೀರ್ಥಹಳ್ಳಿ : ತಾವು ಕಳೆದ ಆಯವ್ಯಯದಲ್ಲಿ ಅಡಿಕೆ ಎಲೆ ಚುಕ್ಕೆ ರೋಗಕ್ಕಾಗಿ ರೂ. 62.00 ಕೋಟಿ ರೂ ಗಳನ್ನು ಒದಗಿಸಿದ್ದಿರಿ ಇದಕ್ಕಾಗಿ ತಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ.

ನಂತರ ಮನವಿ ಪತ್ರ ವನ್ನು ಮುಖ್ಯಮಂತ್ರಿಗಳಿಗೆ ನೀಡಿ ಈಗ ಎಲೆಚುಕ್ಕೆ ರೋಗ ಉಲ್ಬಣಗೊಂಡು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ, ಹಾಗೂ ಶೃಂಗೇರಿ ಮುಂತಾದ ತಾಲ್ಲೂಕುಗಳಲ್ಲಿ ಅನೇಕ ರೈತರ ಅಡಿಕೆ
ತೋಟಗಳೆ ನಾಶವಾಗಿವೆ, ಈ ರೋಗ ಮುಂದುವರೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಇದುವರೆಗೆ ಅಧಿಕಾರಿಗಳು ಕೇವಲ ರೂ. 7.00 ಕೋಟಿ ಗಳನ್ನು ಬಿಡುಗಡೆ ಮಾಡಿದ್ದು, ಈ ಹಣ ರೈತರಿಗೆ
ಯಾವುದಕ್ಕೂ ಸಾಕಾಗಿರುವುದಿಲ್ಲ.

ಆದ್ದರಿಂದ ತಾವುಗಳು ದಯಮಾಡಿ ಅಷ್ಟು ಹಣವನ್ನು ಬಿಡುಗಡೆ ಮಾಡಿ ರೈತರು ಕಳೆದುಕೊಂಡ
ತೋಟಗಳಿಗೆ ಪರಿಹಾರ ಕೊಡಿಸಲು ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಸೂಚಿಸಿ ರೈತರ ನೆರವಿಗೆ
ಬರಬೇಕೆಂದು ಮನವಿ ಸಲ್ಲಿಸಿದ್ದಾರೆ.


Previous Post Next Post