ಚೆಸ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಪಿ.ಯು ಕಾಲೇಜಿನ ಸಾತ್ವಿಕ್ ಎ ಶೆಟ್ಟಿ
ತೀರ್ಥಹಳ್ಳಿ : ದಿನಾಂಕ 25.11.2025 ರಂದು ಬೆಂಗಳೂರಿನಲ್ಲಿ ನಡೆದ ಬಾಲ-ಬಾಲಕಿಯರ ಕರ್ನಾಟಕ ಸ್ಟೇಟ್ ಚೆಸ್ ಚಾಂಪಿಯನ್ ಷಿಪ್ 2025-26 ಪಂದ್ಯಾವಳಿಯಲ್ಲಿ ವಾಗ್ದೇವಿ ಪಿ.ಯು ಕಾಲೇಜಿನ ಸಾತ್ವಿಕ್ ಎ ಶೆಟ್ಟಿ (ದ್ವಿತೀಯ ಪಿಯು ವಿಜ್ಞಾನ ವಿಭಾಗ) ಅತ್ಯುತ್ತಮವಾಗಿ ಆಟವನ್ನು ಪ್ರದರ್ಶಿಸಿ, ಪ್ರಥಮಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಓದುತ್ತಿರುವ ಕಾಲೇಜಿಗೆ,ತಾಲ್ಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾನೆ.
ಈ ವಿದ್ಯಾರ್ಥಿಯು ಬೆಟ್ಟಮಕ್ಕಿ ನಿವಾಸಿಗಳಾದ ಸುಮನ ಮತ್ತು ಅಶೋಕ ದಂಪತಿಗಳ ಪತ್ರ ಶಿಕ್ಷಕ ದಂಪತಿಗಳ ಮಗನಾದ ಈತ ಓದಿನಲ್ಲಿಯೂ ಅತ್ಯಂತ ಪ್ರತಿಭಾನ್ವಿತ, ನಿರಂತರ 12 ವರ್ಷಗಳಿಂದ ಚೆಸ್ ಆಟವನ್ನು ಅತ್ಯಂತ ಆಸಕ್ತಿಯಿಂದ ಆಡುತ್ತಾ ಬಂದಿದ್ದು, SGFI ( ಸ್ಕೂಲ್ ಗೇಮ್ ಫೆಡರೇಷನ್ ಅಫ್ ಇಂಡಿಯಾ) ನಲ್ಲಿ ಸತತ ಎರಡನೆಯ ಬಾರಿಗೆ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುತ್ತಿದ್ದಾನೆ. ಈ ವರ್ಷ ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ತೆರಳುತ್ತಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಯ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕವೃಂದ
ಮತ್ತು ಪೋಷಕರು ಅಭಿನಂದಿಸಿ ರಾಷ್ಟ್ರಮಟ್ಟದಲ್ಲಿ ಚಿನ್ನವನ್ನು ಪಡೆದುಕೊಳ್ಳಲಿ ಎಂದು ಶುಭಹಾರೈಸಿದ್ದಾರೆ.
Tags:
ವಾಗ್ದೇವಿ ಸಂಸ್ಥೆ