ಸಂಚಾರಿ ನಿಯಮ ನಾಮಫಲಕ ಅಳವಡಿಸಿದ ರೋಟರಿ ಕ್ಲಬ್ .. tth

ಸಂಚಾರಿ ನಿಯಮ ನಾಮಫಲಕ ಅಳವಡಿಸಿದ ರೋಟರಿ ಕ್ಲಬ್ 

ತೀರ್ಥಹಳ್ಳಿ : ರಸ್ತೆ ಸುರಕ್ಷತೆ ದೃಷ್ಟಿಯಿಂದ ಹಲವು ಯೋಜನೆಗಳನ್ನು ನೀಡಿರುವ ತೀರ್ಥಹಳ್ಳಿಯ ರೋಟರಿ ಕ್ಲಬ್ ಸಂಸ್ಥೆ ಇಂದು ಸಹ್ಯಾದ್ರಿ ಪಾಲಿಟೆಕ್ನಿಕ್ ಬಳಿ ನೂತನ ಸಂಚಾರಿ ನಿಯಮ ಪಾಲಿಸುವ ಬೋರ್ಡ್ ಹಾಕಲಾಯಿತು.

ಪಟ್ಟಣದ ಹಲವು ಕಡೆ ಬೋರ್ಡ್ ಹಾಗೂ ಸಿಸಿಟಿವಿ ಅಳವಡಿಸಿರುವ ರೋಟರಿ ಕ್ಲಬ್ ಇಂದು ಮತ್ತೊಂದು ಬೋರ್ಡ್ ನೀಡಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲು ಹಾಗೂ ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೋರ್ಡ್ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಜಿಲ್ಲಾಧ್ಯಕ್ಷರಾದ ಪಲಾಕ್ಷಿ, ಪೊಲೀಸ್ ವೃತ್ತ ನಿರೀಕ್ಷಕರಾದ ಇಮ್ರಾನ್ ಬೇಗ್, ಹಾಗೂ ರೋಟರಿ ಸಂಸ್ಥೆಯ ಅಧ್ಯಕ್ಷರು ಸೇರಿ ಹಲವರು ಉಪಸ್ಥಿತರಿದ್ದರು..



Previous Post Next Post