ಮಣಿಪಾಲ ಆರೋಗ್ಯಕಾರ್ಡ್ 2025 ರ ನೋಂದಾವಣೆಗೆ ನವೆಂಬರ್ 30 ಕಡೆಯ ದಿನ - ಅವಿನಾಶ್ ಶೆಟ್ಟಿ
ತೀರ್ಥಹಳ್ಳಿ: ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಾವಣಿಗೆ 30ನೇ ನವೆಂಬರ್ 2025 ಕೊನೆಯ ದಿನ ಎಂದು ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ
ತಿಳಿಸಿದ್ದಾರೆ.
ಇದು ಆಸ್ಪತ್ರೆಯ ಎಲ್ಲಾ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ನೀಡುತ್ತದೆ. ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ, ಯಾರಾದರೂ ಸದಸ್ಯರಾಗಬಹುದು ಮತ್ತು ಪುಯೋಜನಗಳನ್ನು ಪಡೆಯಬಹುದು. ಕಾರ್ಡ್ ಖರೀದಿಸಲು ಹೂಡಿಕೆ ಮಾಡಿದ ಹಣವನ್ನು ಕೇವಲ ಒಂದು ಅಥವಾ ಎರಡು ಸಲ ಕಾರ್ಡ್ ಬಳಕೆಗಳಲ್ಲಿ ರಿಯಾಯಿತಿಯ ರೂಪದಲ್ಲಿ 'ಹಿಂಪಡೆಯಬಹುದು. ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ” ಎಂಬುದು ಮಣಿಪಾಲ್ ಆರೋಗ್ಯ ಕಾರ್ಡ್
ನ ದ್ವೇಯ ವಾಕ್ಯ.
ಕುಲಾಧಿಪತಿ ಡಾ. ರಾಮದಾಸ್ ಎಂ, ಪೈ ಅವರ ಮಾರ್ಗದರ್ಶನದಲ್ಲಿ 2000 ರಲ್ಲಿ ಪ್ರಾರಂಭಿಸಲಾದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯು ಈಗ ರಜತ ಮಹೋತ್ಸವದ ಮೈಲಿಗಲ್ಲನ್ನು ತಲುಪಿದೆ. 25 ವರ್ಷಗಳಲ್ಲಿ, ಇದು ಕೋಟ್ಯಂತರ ಫಲಾನುಭವಿಗಳ ಜೀವನವನ್ನು
ಮುಟ್ಟಿದೆ. 2000 ನೇ ಇಸವಿಯಲ್ಲಿ, 3,200 ಕುಟುಂಬಗಳು ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯಡಿ ನೋಂದಣಿ ಮಾಡಿದ್ದರು . ಕಳೆದ ಹಣಕಾಸು ವರ್ಷದಲ್ಲಿ ನಾವು 1.25 ಲಕ್ಷ ಕುಟುಂಬಗಳು ಈ ಯೋಜನೆಗಳ ಅಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಮತ್ತು ನಾವು ಈ
ಯೋಜನೆಯಡಿಯಲ್ಲಿ 6.72 ಲಕ್ಷ ಸದಸ್ಯರನ್ನು ಹೊಂದಿದ್ದೇವೆ. ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಪುಯೋಜನವನ್ನು ನೀಡುತ್ತಿದೆ.
ಮಣಿಪಾಲ್ ಆರೋಗ್ಯ ಕಾರ್ಡ್‌ದಾರರು ತಜ್ಞ ಮತ್ತು ಸೂಪರ್ ಸ್ಪೆಷಲಿಸ್ಟ್ ವೈದ್ಯರೊಂದಿಗೆ ಸಮಾಲೋಚನೆ ಶುಲ್ಕದಲ್ಲಿ 50% ರಿಯಾಯಿತಿ, ರೋಗನಿರ್ಣಯ ಮತ್ತು ಪುಯೋಗಾಲಯ ಪರೀಕ್ಷೆ ಸೇವೆಯಲ್ಲಿ 25% ರಿಯಾಯಿತಿ, ರೇಡಿಯಾಲಜಿ, ಹೊರರೋಗಿ, ಕಾರ್ಯವಿಧಾನಗಳು ಮತ್ತು
ಮಧುಮೇಹ ಪಾದದ ಆರೈಕೆಯಲ್ಲಿ 20% ರಿಯಾಯಿತಿ, ಡಯಾಲಿಸಿಸ್‌ನಲ್ಲಿ ( 100 ರಿಯಾಯಿತಿ, ಆಸ್ಪತ್ರೆಯ ಔಷಧಿಗಳ ಮೇಲೆ 10% ವರೆಗೆ ರಿಯಾಯಿತಿ ಮತ್ತು ಜನರಲ್ ವಾರ್ಡ್‌ನಲ್ಲಿ ಒಳರೋಗಿಗಳ ಬಿಲ್‌ಗಳಲ್ಲಿ (ಕನ್ಸುಮಬೆಲ್ ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ) 25% ರಿಯಾಯಿತಿ ಸೌಲಭ್ಯವಿದೆ.
ಮಣಿಪಾಲ್ ಆರೋಗ್ಯ ಕಾರ್ಡ್ 2024ರ ಯೋಜನೆಯು “ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ 7 350 / -, ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ 7700/- ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) 900/-. ಇದೊಂದು ಹೆಚ್ಚುವರಿ ಲಾಭವಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ 600/-, ಕುಟುಂಬಕ್ಕೆ 950/- ಮತ್ತು ಕೌಟಂಬಿಕ ಪ್ಲಸ್ ಯೋಜನೆಗೆ 1100/- ಆಗಿರುತ್ತದೆ.
ಕಾರ್ಡ್‌ದಾರರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ; ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ: ಕಾರ್ಕಳದ
ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ; ಮಂಗಳೂರು ಮತ್ತು ಅತ್ತಾವರದ ಕೆಎಂಸಿ ಆಸ್ಪತ್ರೆಗಳು; ಕಟೀಲಿನ
ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ: ಗೋವಾದ ಮಣಿಪಾಲ ಆಸ್ಪತ್ರೆ ಮತ್ತು ಮಣಿಪಾಲ ಮತ್ತು
ಮಂಗಳೂರಿನ ದಂತ ಮತ್ತು ಆಯುರ್ವೇದ ಆಸ್ಪತ್ರೆಗಳಲ್ಲಿ ಪುಯೋಜನಗಳನ್ನು ಪಡೆಯಬಹುದು.
ಮಣಿಪಾಲ ಮತ್ತು ಮಂಗಳೂರಿನಲ್ಲಿ ಇತರ ಆಸ್ಪತ್ರೆಗಳಲ್ಲಿನ ರಿಯಾಯಿತಿಗಳು ಮತ್ತು ಹೆಚ್ಚಿನ ಮಾಹಿತಿಗಾಗಿ, www.manipalhealthcard.com ಗೆ ಭೇಟಿ ನೀಡಿ ಅಥವಾ 9980854700 / 08202923748 ಅನ್ನು ಸಂಪರ್ಕಿಸಿ. ಎಲ್ಲಾ ನಮ್ಮ ಅಧಿಕೃತ ಪ್ರತಿನಿಧಿಗಳ ಮೂಲಕ ನೋಂದಣಿ ಮಾಡಬಹುದು.
ಪತ್ರಿಕಾಗೋಷ್ಟಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವ್ಯವಸ್ಥಾಪಕರಾದ ಶ್ರೀ ಮೋಹನ್ ಶೆಟ್ಟಿ
ಹಾಗೂ ಮಾರುಕಟ್ಟೆ ವಿಭಾಗದ ಪ್ರತಿನಿಧಿಯಾದ ಶ್ರೀ ಅನಿಲ್ ನಾಯ್ಕ ಇವರೆಲ್ಲರೂ ಉಪಸ್ಥಿತರಿದ್ದರು.
2025ರ ನೋಂದಾವಣಿಗಾಗಿ ಅರ್ಜಿಗಳು ಕೆಳಕಂಡ ಅಧಿಕೃತ ಪ್ರತಿನಿಧಿಗಳ ಬಳಿ ಲಭ್ಯವಿದೆ:
ತೀರ್ಥಹಳ್ಳಿ: ಪ್ರಶಾಂತ್ ಮಕ್ಕಿಮನೆ: 9972283347, ಸೈಂಟ್ ಮಿಲಾಗ್ರಿಸ್ ಸೌಹಾರ್ದ: 8884459070
ರಾಮೇಶ್ವರ ಸೌಹಾರ್ದ: 9448643522, ವಿಪ್ರ ಸೌಹಾರ್ದ: 9449961384, ಗಾಯತ್ರಿ ಸೌಹಾರ್ದ
9483002694, : 9481308538.
ಬೆಜವಳ್ಳಿ: ನಾಗರಾಜ್ ಎಚ್.ಎಸ್: 9483818863
Tags:
ತೀರ್ಥಹಳ್ಳಿ ಸುದ್ದಿ