ಮನೆಯಿಂದ ಕಾಲೇಜ್ ಗೆ ತೆರಳಿದ ತೀರ್ಥಹಳ್ಳಿಯ ಯುವತಿ ನಿಗೂಢ ಕಣ್ಮರೆ!
ತೀರ್ಥಹಳ್ಳಿ : ಮನೆಯಿಂದ ಕಾಲೇಜ್ ಗೆ ತೆರಳಿದ ಯುವತಿಯೋರ್ವಳು, ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ, ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಗ್ಗೊಡಿಗೆ ಗ್ರಾಮದ ಕೊರೊಡಿ ಆನಂದ್ ಹೆಚ್ ಎಸ್ ಎಂಬುವವರ ಪುತ್ರಿ ಈಶಾನ್ಯ (19) ನಾಪತ್ತೆಯಾದ ಯುವತಿ ಎಂದು ಗುರುತಿಸಲಾಗಿದೆ. ಈ ಕುರಿತಂತೆ ಪೊಲೀಸ್ ಇಲಾಖೆಯು ನವೆಂಬರ್ 15 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಯುವತಿಯು ಶಿವಮೊಗ್ಗದ ವಸುಂಧರ ಹಾಸ್ಟೆಲ್‌ನಲ್ಲಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ 2 ನೇ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದರು. ನವೆಂಬರ್ 10 ರಂದು ಮನೆಯಿಂದ ಕಾಲೇಜ್‌ಗೆ ಹೋಗುವುದಾಗಿ ಯುವತಿ ಹೇಳಿ ಹೋಗಿದ್ದು, ನಂತರ ಕಣ್ಮರೆಯಾಗಿದ್ದಾರೆ. ಎಲ್ಲಿಯೂ ಸುಳಿವು ಲಭ್ಯವಾಗಿಲ್ಲ.
ಚಹರೆ : ಯುವತಿಯು 5 ಅಡಿ ಎತ್ತರ, ದೃಢವಾದ ಮೈಕಟ್ಟು, ದುಂಡು ಮುಖ, ಎಣ್ಣೆ ಕಪ್ಪು ಮೈ ಬಣ್ಣ, ತಲೆಯಲ್ಲಿ ಸುಮಾರು 14 ಇಂಚು ಉದ್ದದ ಕಪ್ಪು ಕೂದಲಿದ್ದು, ಎಡ ತುಟಿಯ ಮೇಲ್ಭಾಗ ರಾಗಿ ಕಾಳು ಗಾತ್ರದ ಕಪ್ಪುಮಚ್ಚೆ ಇರುತ್ತದೆ. ಕನ್ನಡ ಮಾತನಾಡಲು, ಓದಲು – ಬರೆಯಲು ತಿಳಿದಿದ್ದು ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ್ ಬಿಳಿ ಬಣ್ಣದ ವೇಲ್ ಧರಿಸಿರುತ್ತಾರೆ. ಹಾಗೂ ಒಂದು ಕಪ್ಪು ಬಣ್ಣದ ಸ್ಕೂಲ್ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾರೆ.
ಸದರಿ ಯುವತಿಯ ಮಾಹಿತಿ ಲಭ್ಯವಾದಲ್ಲಿ ಎಸ್.ಪಿ. ಶಿವಮೊಗ್ಗ -08182-261400, ಡಿವೈಎಸ್‌ಪಿ ತೀರ್ಥಹಳ್ಳಿ 08181 – 220388, ಸಿಪಿಐ ಮಾಳೂರು ವೃತ್ತ :- 9480803333/ಪಿಎಸ್‌ಐ ಆಗುಂಬೆ ರವರಿಗೆ :- 9480803314, ಕಂಟ್ರೋಲ್ ರೂ ಶಿವಮೊಗ್ಗ – 9480803300, ಇವರುಗಳನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Tags:
ಆಗುಂಬೆ ಸುದ್ದಿ