ಹಿರಿಯ ಹಾಸ್ಯನಟ ಉಮೇಶ್ ಇನ್ನಿಲ್ಲ
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್ ಉಮೇಶ್ ಅವರು ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಉಮೇಶ್ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ( ಇವತ್ತು ಬೆಳಗ್ಗೆ ವಿಧಿವಶರಾಗಿದ್ದಾರೆ. ಕಳೆದ 2 ತಿಂಗಳಿಂದ ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು.
ಇಂದು ನಟ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ಸ್ಯಾಂಡಲ್ವುಡ್ಗೆ ಇದು ನೋವಿನ ಭಾನುವಾರವಾಗಿದೆ. ಹಿಂದೆ ಮನೆಯಲ್ಲಿ ಸೊಂಟ ಹಾಗೂ ಕಾಲು ಪೆಟ್ಟು ಮಾಡಿ ಕೊಂಡಿದ್ದರು. ಕಾಲಿಗೆ ಸರ್ಜರಿ ಮಾಡುವಾಗ ಅವರಿಗೆ ಲಿವರ್ ಕ್ಯಾನ್ಸರ್ ಇರುವ ಮಾಹಿತಿ ಗೊತ್ತಾಗಿತ್ತು.
ಬೆಳಗ್ಗೆ 8.20ರ ಸುಮಾರಿಗೆ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಲೋ ಬಿಪಿ ಆಗಿತ್ತು. ಕೆಲವು ದಿನದಿಂದ ವೆಂಟಿಲೇಟರ್ ಅಲ್ಲಿದ್ರು ಅಂತ ಪುತ್ರಿ ಭಾವುಕರಾಗಿದ್ದಾರೆ.
ಉಮೇಶ್ ಅವರು ಎಲ್ಲೆ ಹೋದ್ರೂ ಸರಿಯೇ ಮಗಳು ಜೊತೆಗೆ ಇರ್ತಾ ಇದ್ದರು. ಅದೇ ರೀತಿನೇ ಅಪ್ಪನೊಟ್ಟಿಗೇನೆ ಇರೋ ಮಗಳು ಈಗ ಆಸ್ಪತ್ರೆಯಲ್ಲೂ ಅಪ್ಪನೊಟ್ಟಿಗೇನೆ ಇದ್ದರು. ಕಳೆದ ತಿಂಗಳು ಸ್ಯಾಂಡಲ್‌ವುಡ್‌ನ ಹಾಸ್ಯ ನಟ ಎಂ.ಎಸ್.ಉಮೇಶ್ ಅವರು ಬೆಳಗ್ಗೆ ಸ್ನಾನಕ್ಕೆ ಹೋಗಿದ್ದಾಗ ಬಾತ್ ರೂಮ್ ಅಲ್ಲಿ ಜಾರಿ ಬಿದ್ದಿದ್ದರು. ಎಡ ಭಾಗಕ್ಕೆ ಪೆಟ್ಟು ಬಿದ್ದಿತ್ತು. ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ಕ್ಯಾನಿಂಗ್ ಕೂಡ ಮಾಡಲಾಗಿತ್ತು.
ಎಂ.ಎಸ್.ಉಮೇಶ್ ಅವರು 350 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸರಿ ಸುಮಾರು 6 ದಶಕದಿಂದಲೂ ಸಿನಿಮಾರಂಗದಲ್ಲಿದ್ದಾರೆ. ರಾಜ್‌ಕುಮಾರ್ ಸಿನಿಮಾಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ.
ಎಂ.ಎಸ್.ಉಮೇಶ್ ಅವರ ಹಾಸ್ಯಕ್ಕೆ ನಗದವ್ರೇ ಇಲ್ಲ. ಇವರ ಹಾಸ್ಯ ಪರಿಶುದ್ಧವಾಗಿಯೇ ಇರ್ತಾ ಇತ್ತು.
Tags:
ಸಿನಿಮಾ ಸುದ್ದಿ