ಕಾನೂನನ್ನು ದುರುಪಯೋಗ ಮಾಡಿಕೊಳ್ತಿದ್ದಾರಾ ಪಶು ವೈದ್ಯಾಧಿಕಾರಿಗಳು..!? Tth

ಕಾನೂನನ್ನು ದುರುಪಯೋಗ ಮಾಡಿಕೊಳ್ತಿದ್ದಾರಾ ಪಶು ವೈದ್ಯಾಧಿಕಾರಿಗಳು..!?

ತೀರ್ಥಹಳ್ಳಿ : ವೈದ್ಯೋ ನಾರಾಯಣೋ ಹರಿಃ ಎನ್ನುವುದು ಮಾತು ಅಷ್ಟೇ ಆದಂತೆ ಕಾಣಿಸುತ್ತಿದೆ. ವೈದ್ಯರನ್ನು ದೇವರಂತೆ ನೋಡಿ ಎನ್ನುವುದು ನಿಜ ಆದರೆ ಇತ್ತೀಚಿಗೆ ವೈದ್ಯರು ಹಣದ ವ್ಯಾಮೋಹಕ್ಕೆ ಬಿದ್ದು ವೈದ್ಯೋ ಲಕ್ಷೀಯೇ ನಮಃ ಎನ್ನುವ ಪರಿಸ್ಥಿತಿಗೆ ಬಂದಂತೆ ಆಗಿದೆ. ಜನರನ್ನು ನೋಡುವ ವೈದ್ಯರೇ ಆಗಲಿ ಪ್ರಾಣಿಗಳನ್ನು ನೋಡುವ ವೈದ್ಯರೇ ಆಗಲಿ ಅವರಿಗೆ ಹಣವೇ ಮುಖ್ಯವಾಗಿದೆ. ಅದಕ್ಕಾಗಿ ಕಾನೂನನ್ನು ಸಹ ದುರುಪಯೋಗ ಮಾಡಿಕೊಳ್ತಿದ್ದಾರಾ? ಎಂಬ ಅನುಮಾನ ಸೃಷ್ಟಿ ಮಾಡಿದೆ.

ತೀರ್ಥಹಳ್ಳಿ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ರಮ ಗೋ ಸಾಗಾಟ ಆಗುತ್ತಿದೆ ಎನ್ನುತ್ತಾರೆ. ಆದರೆ ಅದು ಕಾನೂನು ಪ್ರಕಾರ ಸಾಗಾಟ ಆದಂತೆ ಕಾಣಿಸುತ್ತಿದೆ. ಇದರಿಂದ ಪೊಲೀಸರು ಸಹ ಏನು ಮಾಡಲಾಗದ ಪರಿಸ್ಥಿತಿಗೆ ಬಂದಿದ್ದಾರೆ. ಗೋ ಕಳ್ಳತನ ನಡೆದರೆ ಅದನ್ನು ಹಿಡಿಯಬಹುದು ಆದರೆ ಕಾನೂನು ಪ್ರಕಾರ ಗೋ ಸಾಗಾಟ ಮಾಡಲು ಅನುಮತಿ ನೀಡಿದರೆ ಪೊಲೀಸರು ಸಹ ಏನು ಮಾಡಲು ಸಾಧ್ಯ..!

ಒಂದು ಕಡೆಯಿಂದ ಮತ್ತೊಂದು ಕಡೆಗೆ ಗೋವನ್ನು ಸಾಗಿಸಲು ಹಲವು ಕಾನೂನುಗಳು ಇವೆ. ಆದರೆ ಅದನ್ನು ಇತ್ತೀಚಿಗೆ ಪಶು ವೈದ್ಯಾಧಿಕಾರಿಗಳು ಅವೆಲ್ಲವನ್ನು ಗಾಳಿಗೆ ತೂರಿ ತಮ್ಮ ಹಣದ ವ್ಯಾಮೋಹದಿಂದ ಕಾನೂನನ್ನು ದುರುಪಯೋಗ ಮಾಡಿಕೊಳ್ತಿದ್ದಾರಾ? ಎಂಬ ಪ್ರೆಶ್ನೆ ಇದೆ. ಕೂತಲ್ಲಿಯೇ ಸಹಿ ಮಾಡಿ ಕೊಡುತ್ತಾರೆ ಎಂಬ ಆರೋಪ ಸಹ ಇತ್ತೀಚಿಗೆ ಕೇಳಿ ಬರುತ್ತಿದೆ. ಗೋವನ್ನು ತೆಗೆದುಕೊಂಡು ಹೋಗುವವರ ಬಗ್ಗೆ ತಿಳಿಯುವುದಿಲ್ಲ. ರೈತರೋ ಅಥವಾ ಬೇರೆಯವರೋ ನೋಡುವುದಿಲ್ಲ. ಒಟ್ಟಿನಲ್ಲಿ ಕಾನೂನನ್ನೇ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಿ ಈ ವಿಚಾರವಾಗಿ ಸೂಕ್ತ ತನಿಖೆ ನಡೆಸಬೇಕಿದೆ..
Previous Post Next Post