ಜೆಸಿಐ ವತಿಯಿಂದ ಇಂದು"ನಾಯಿ ಕಳೆದಿದೆ" ನಾಟಕ ಪ್ರದರ್ಶನ..! Jci Thirthahalli

ಜೆಸಿಐ ವತಿಯಿಂದ ಇಂದು"ನಾಯಿ ಕಳೆದಿದೆ" ನಾಟಕ ಪ್ರದರ್ಶನ..!

ತೀರ್ಥಹಳ್ಳಿ:  ಜೆಸಿ ಸಪ್ತಾಹ 2025 ರ ಪ್ರಯುಕ್ತ ಲಾವಣ್ಯ (ರಿ.), ಬೈಂದೂರು ಅರ್ಪಿಸುವ ವಿಶೇಷವಾದ ನಾಟಕವೊಂದು ಸೆಪ್ಟೆಂಬರ್ 14 ರ ಭಾನುವಾರ ಸಂಜೆ 1
6 ಗಂಟೆಗೆ ಗೋಪಾಲಗೌಡ ರಂಗಮಂದಿರದಲ್ಲಿ ರಾಜೇಂದ್ರ ಕಾಮತ್, ಬೆಂಗಳೂರು ಇವರ ರಚನೆ ಮತ್ತು ನಿರ್ದೇಶನದಲ್ಲಿ
"ನಾಯಿ ಕಳೆದಿದೆ" ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕದ ಕಥೆ ಏನು?

ಬೆಂಗಳೂರಿನಲ್ಲಿದ್ದುಕೊಂಡೇ ಕಾರ್ಯದೊತ್ತಡದ ನೆಪ ನೀಡಿ ಪ್ರತ್ಯೇಕವಾಗಿ ವಾಸಿಸುವ, ತಂದೆ-ತಾಯಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಲಾಗದ, ವಾರಕ್ಕೊಮ್ಮೆ ಮನೆಗೆ ಬಂದಾಗಲೂ ಲ್ಯಾಪ್‌ಟಾಪ್‌, ಮೊಬೈಲ್‌ನಲ್ಲಿ ಮುಳುಗುವ ಮಕ್ಕಳು, ಬಾಳಿನ ಇಳಿ ಹೊತ್ತಿನಲ್ಲಿರುವ ವೃದ್ಧ ತಂದೆ-ತಾಯಿಯರಲ್ಲಿ ಉಂಟು ಮಾಡುವ ತಲ್ಲಣಗಳು ಅಮೇರಿಕಾದ ಭವ್ಯ ಬದುಕಿನ ಆಸೆ ಹೊತ್ತು ಅಲ್ಲಿಗೆ ತೆರಳಿದ ಮಗ ಸೊಸೆ ವೃದ್ಯಾಪ್ಯದಲ್ಲಿ ಆಸರೆಯಾಗಲಿಲ್ಲವಲ್ಲ ಎಂಬ ವೇದನೆ ಒಂದಡೆಯಾದರೆ, ಇನ್ನೊಂದೆಡೆ ಅವರು ಬಿಟ್ಟು ಹೋದ ನೆಮ್ಮದಿಯ ಬದುಕಿಗೆ ಮುಳ್ಳಾಗಿ ಕಾಡುವ ನಾಯಿ, ನಾಯಿಯ ಬೊಗಳುವಿಕೆ ವೃದ್ಧರ ಬದುಕನ್ನು ನರಕ ಸದೃಶವಾಗಿಸುತ್ತದೆ. ಫೋನಿನಲ್ಲೂ ತಮಗಿಂತ ನಾಯಿ ಕುರಿತಾಗಿ ತೋರುವ ಕಾಳಜಿ, ಕೇಳುವ ಪ್ರಶ್ನೆಗಳು ಅವರ ಕನಸುಗಳನ್ನು ನುಚ್ಚುನೂರಾಗಿಸುತ್ತವೆ.

ಇಂತಹ ವಿಶೇಷ ವಿಭಿನ್ನ ರೀತಿಯ ನಾಟಕ ಇಂದು ಸಂಜೆ ಪ್ರದರ್ಶನಗೊಳ್ಳಲಿದ್ದು ಜೆಸಿಐ ತೀರ್ಥಹಳ್ಳಿ ಆಯೋಜನೆ ಮಾಡಿದೆ. ಸರ್ವರನ್ನು ಜೆಸಿಐ ಅಧ್ಯಕ್ಷರು, ಸದಸ್ಯರು ಸ್ವಾಗತಿಸಿದ್ದಾರೆ.

Previous Post Next Post