ದಸರಾ ಸಂಚಾಲಕರಾಗಿ ಅಮರಾನಾಥ್ ಶೆಟ್ಟಿ ಆಯ್ಕೆ..! Dasara

ದಸರಾ ಸಂಚಾಲಕರಾಗಿ ಅಮರಾನಾಥ್ ಶೆಟ್ಟಿ ಆಯ್ಕೆ..!

ಈ ಬಾರಿ ರಂಗೇರಲಿದೆ ದಸರಾ ಉತ್ಸವ..!

ತೀರ್ಥಹಳ್ಳಿ : ಬಾರಿ ಕುತೂಹಲ ಹುಟ್ಟಿಸಿದ್ದ ದಸರಾ ಸಮಿತಿ ಸಭೆಯಲ್ಲಿ ನೂತನ ಸಂಚಾಲಕರ ಆಯ್ಕೆ ನಡೆದಿದ್ದು ಯುವ ಮುಖಂಡರಾದ ಅಮರನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ. 
ಸಂಚಾಲಕರ ಆಯ್ಕೆ ವಿಚಾರದಲ್ಲಿ ಬಾರಿ ಹೆಸರು ಕೇಳಿ ಬಂದಿದ್ದವು. ಆದರೆ ಯುವಕರನ್ನು ಮುಂದೆ ತರುವ ಪ್ರಯತ್ನ ದೇವಸ್ಥಾನ ಸಮಿತಿ ಮಾಡಿದ್ದು ಅಮರಾನಾಥ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ.

ರಾಮೇಶ್ವರ ದೇವಸ್ಥಾನ ಸಭಾಭವನದಲ್ಲಿ ದಸರಾ ಸಭೆ ನಡೆಸಿದ್ದು ಗೌರವ ಅಧ್ಯಕ್ಷರಾಗಿ ಶಾಸಕ ಆರಗ ಜ್ಞಾನೇಂದ್ರ, ಆರ್ ಎಂ ಮಂಜುನಾಥ್ ಗೌಡ, ಕಿಮ್ಮನೆ ರತ್ನಾಕರ್, ಹಾಗೂ ತಹಸೀಲ್ದಾರ್ ರಂಜಿತ್ ಇರಲಿದ್ದಾರೆ. ಅಧ್ಯಕ್ಷರಾಗಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ ಇರಲಿದ್ದು ಉಪಾಧ್ಯಕ್ಷರಾಗಿ ನವೀನ್ ಹೆದ್ದೂರು, ಕೆಸ್ತೂರು ಮಂಜುನಾಥ್  ಇರಲಿದ್ದಾರೆ.

ಈ ಬಾರಿ ದಸರಾ ಅತ್ಯಂತ ವಿಜೃಂಭಣೆ ಯಿಂದ ನಡೆಸುವ ಉದ್ದೇಶದಿಂದ ಯುವಕರಿಗೆ ಅವಕಾಶ ಕಲ್ಪಿಸುವ ಸಲುವಾಗಿ
ಅಮರಾನಾಥ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. 
ಈ ಬಾರಿ ಎಲ್ಲಾ ದಸರಾಗಳಿಗಿಂತ ವಿಭಿನ್ನ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಆರ್ಥಿಕ ಸಮಿತಿ ಅಧ್ಯಕ್ಷರಾಗಿ ಸಿರಿಬೈಲ್ ಧರ್ಮೇಶ್, ಸಾಂಸ್ಕೃತಿಕ ಸಮಿತಿಯಲ್ಲಿ  ಡಾನ್ ರಾಮಣ್ಣ, ಮೆರವಣಿಗೆ ಸಮಿತಿ ಬಿ. ಗಣಪತಿ, ಮೂಡ್ ರಾಮದಾಸ್, ವಿದ್ಯುತ್ ಅಲಂಕಾರ ಸಮಿತಿ ಮಿಲ್ಕೆರಿ ಹರೀಶ್, ಆಹಾರ ಸಮಿತಿ ಮೂರ್ತಿರಾಯರು, ಧಾರ್ಮಿಕ ಸಮಿತಿ ಸೇರಿ ಹಲವು ಸಮಿತಿಗೆ ಆಯ್ಕೆ ಮಾಡಲಾಗಿದೆ..

Previous Post Next Post