ಸೆ. 6 ರಂದು ದಸರಾ ಸಭೆ - ಈ ಸಾರಿ ಬಾರಿ ಬದಲಾವಣೆ ಸಾಧ್ಯತೆ..!? Dasara

ಸೆ. 6 ರಂದು ದಸರಾ ಸಭೆ - ಈ ಸಾರಿ ಬಾರಿ ಬದಲಾವಣೆ ಸಾಧ್ಯತೆ..!?

ತೀರ್ಥಹಳ್ಳಿ : ಎರಡನೇ ಮೈಸೂರು ಎಂದೇ ಖ್ಯಾತಿ ಪಡೆದಿದ್ದ ತೀರ್ಥಹಳ್ಳಿಯಲ್ಲಿ ದಸರಾ ಸಂಬಂಧಪಟ್ಟಂತೆ ಸೆ. 6 ರ ಶನಿವಾರ ಸಭೆ ಕರೆಯಲಾಗಿದೆ. ಸಂಜೆ 4 ಗಂಟೆಗೆ ಗೋಪಾಲಗೌಡ ರಂಗಮಂದಿರದಲ್ಲಿ ಸಭೆ ನಡೆಯಲಿದ್ದು ಸಂಘ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಹಾಗೂ ಸಾರ್ವಜನಿಕರು ಆಗಮಿಸುವಂತೆ ತಿಳಿಸಲಾಗಿದೆ.

ಈ ಸಾರಿ ಬಾರಿ ಬದಲಾವಣೆ ಸಾಧ್ಯತೆ..!?

ರಾಮೇಶ್ವರ ದೇವರ ದಸರಾ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನಡೆಸುವ ಉದ್ದೇಶ ಹೊಂದಿದ್ದು ಆ ಕಾರಣದಿಂದ ಹಲವಾರು ಬದಲಾವಣೆ ಆಗುವ ಸಾಧ್ಯತೆ ಇದೆ. ಇಲ್ಲಿಯವರೆಗೆ ದೇವಸ್ಥಾನದಲ್ಲಿ ಅಧಿಕೃತವಾಗಿ ಆಡಳಿತ ಸಮಿತಿ ಇರಲಿಲ್ಲ. ಈ ಬಾರಿ ಸಮಿತಿ ಇರುವುದರಿಂದ ಅವರ
ತೀರ್ಮಾನ ಬಹಳ ಮುಖ್ಯವಾಗುವ ಸಾಧ್ಯತೆ ಇದೆ.

ಸಂಚಾಲಕರ ಬದಲಾವಣೆ ಆಗುತ್ತಾ..!? 

ಕಳೆದ ಬಾರಿ ಜಾತ್ರಾ ಸಂದರ್ಭದಲ್ಲಿ ಸಂಚಾಲಕರ ವಿಚಾರವಾಗಿ ಬಾರಿ ಚರ್ಚೆ ಆಗಿ ಇಬ್ಬರು ಸಂಚಾಲಕರನ್ನು ಮಾಡಲಾಗಿತ್ತು. ಹಾಗಾಗಿ ದಸರಾ ಸಮಿತಿ ಸಂಚಾಲಕರು ಬದಲಾವಣೆ ಆಗಿ ಹೊಸ ಮುಖಗಳಿಗೆ ಅವಕಾಶ ಸಿಗುತ್ತಾ? ಎಂಬುದು ಒಂದೆಡೆ ಆದರೆ ಮಹಿಳೆಯರಿಗೆ ಈ ಅವಕಾಶ ಸಿಗುತ್ತಾ? ಎಂಬ ಪ್ರೆಶ್ನೆ ಸಹ ಈಗ ಇದೆ. ಈಗಾಗಲೇ ಹಲವಾರು ಹೆಸರು ಕೇಳಿ ಬರುತ್ತಿದ್ದು ಸೊಪ್ಪುಗುಡ್ಡೆ ರಾಘವೇಂದ್ರ, ಕಂಡಿಲ್ ರಾಘವೇಂದ್ರ, ಮುಜರಾಯಿ ಸಮಿತಿ ನಿರ್ದೇಶಕರಾದ ವರಲಕ್ಷ್ಮಿ ಸೇರಿ ಇತರ ಮಹಿಳೆಯರ ಹೆಸರು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಬಾರಿ ಕುತೂಹಲ ಮೂಡಿಸಿದೆ..

ಕುತೂಹಲ ಮೂಡಿಸಿದ ಮಹಾದ್ವಾರ..!

ಕೊಪ್ಪ ಸರ್ಕಲ್ ನಲ್ಲಿ ನಿರ್ಮಾಣ ಮಾಡುವ ಮಹಾದ್ವಾರದ ಬಗ್ಗೆ ಬಾರಿ ಕುತೂಹಲ ಮೂಡಿಸಿದ್ದು ಕಳೆದ ಬಾರಿ ಆಂಜನೇಯ ರಾಮ ಲಕ್ಷ್ಮಣ ಇರುವ ದ್ವಾರ ನಿರ್ಮಾಣ ಮಾಡಲಾಗಿತ್ತು. ಈ ಬಾರಿ ಸಂಚಾಲಕರಾಗಿ ಮಹಿಳೆಯರಿಗೆ ಅವಕಾಶ ಸಿಕ್ಕರೆ ದೇವಿ ಸ್ವರೂಪ ದ್ವಾರ ನಿರ್ಮಾಣ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ದಸರಾ ಸಭೆ ಪಕ್ಷಾತೀತವಾಗಿ ನಡೆಯಲಿದ್ದು ಶಾಸಕ ಆರಗ ಜ್ಞಾನೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿ ಹಲವರು ಭಾಗಿಯಾಗಲಿದ್ದಾರೆ.
Previous Post Next Post