ಅಂತರಾಷ್ಟ್ರೀಯ ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದವಾಗ್ದೇವಿ ಸಂಸ್ಥೆಯ ಲಿಖಿತ್ ಮತ್ತು ಶೀತಲ್ vagdevi

ಅಂತರಾಷ್ಟ್ರೀಯ ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದ
ವಾಗ್ದೇವಿ ಸಂಸ್ಥೆಯ ಲಿಖಿತ್ ಮತ್ತು ಶೀತಲ್
ತೀರ್ಥಹಳ್ಳಿ : ದಿನಾಂಕ 03.08.2025 ರಂದು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಡಾ.ಶಿಹಾನ್ ಅಝ್
ಮುಹೀಬ್ ರವರು ಆಯೋಜಿಸಿದ್ದ 3ನೆಯ ಅಂತರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ವಾಗ್ದೇವಿ ಪ.ಪೂ
ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಲಿಖಿತ್ ಪಿ.ವಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ.

ಈ ವಿದ್ಯಾರ್ಥಿಯು ನೊಣಬೂರು ನಿವಾಸಿಗಳಾದ ವಾಣಿಶ್ರೀ ಹೆಚ್.ಎಂ ಮತ್ತು ಕೆ.ಸಿ ಪಾಂಡುರಂಗ ಇವರ ಪುತ್ರ.
ಹಾಗೂ ಇದೇ ಪಂದ್ಯಾಟದಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿನಿಯಾದ ಶೀತಲ್ ಸುಸ್ಸನ್ನ ಭಾಗವಹಿಸಿ
ಕುಮಿಟೆ ವಿಭಾಗದಲ್ಲಿ ಪ್ರಥಮ ಮತ್ತು ಕಟ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. ಇವಳು ಮಂಡಗದ್ದೆ
ನಿವಾಸಿಗಳಾದ ಸುಮನ್ ಸಿರಿನ್ ಮತ್ತು ಪುನೀತ್ ಕುಮಾರ್ ದಂಪತಿಗಳ ಪುತ್ರಿ.

ಇವರ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣಸಂಸ್ಥೆಯ ಅಧ್ಯಕ್ಷರು ಸದಸ್ಯರು ಉಪನ್ಯಾಸಕವೃಂದ
ಶಿಕ್ಷಕವೃಂದ ಮತ್ತು ಪೋಷಕರು ಅಭಿನಂದಿಸಿರುತ್ತಾರೆ.
Previous Post Next Post