ಖೇಲೋ ಇಂಡಿಯಾ ವುಮೆನ್ಸ್ ಲೀಗ್ ನಲ್ಲಿ ಬಂಗಾರದ ಪದಕ ಗೆದ್ದ ವಾಗ್ದೇವಿ ಶಾಲೆಯ ವಿದ್ಯಾರ್ಥಿನಿ Vagdevi Student

ಖೇಲೋ ಇಂಡಿಯಾ ವುಮೆನ್ಸ್ ಲೀಗ್ ನಲ್ಲಿ ಬಂಗಾರದ ಪದಕ ಗೆದ್ದ ವಾಗ್ದೇವಿ ಶಾಲೆಯ ವಿದ್ಯಾರ್ಥಿನಿ

ತೀರ್ಥಹಳ್ಳಿ : ಬೆಂಗಳೂರಿನ CMRI ವಿಶ್ವವಿದ್ಯಾಲಯ ಕ್ಯಾಂಪಸ್ ಇಂದೋರ್ ಹಾಲ್ ನಲ್ಲಿ ಭಾನುವಾರ ನಡೆದ ಅಸ್ಮಿತಾ ಖೇಲೋ ಇಂಡಿಯಾ ವುಮೆನ್ಸ್ ಲೀಗ್ ನ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಾನ್ವಿ ಜೊಯ್ಸ್ ಬಂಗಾರದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. 

ಇವಳು ತೀರ್ಥಹಳ್ಳಿ ನಿವಾಸಿಗಳಾದ ಅರ್ಚನಾ ಜೋಯ್ಸ್ ಮತ್ತು ಮಹಾಬಲ ಜೋಯ್ಸ್ ರವರ ಪುತ್ರಿಯಾಗಿದ್ದಾಳೆ . 
ಇವಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ  ಸಂಸ್ಥೆಯ ಅಧ್ಯಕ್ಷರು ಸದಸ್ಯರು ಶಿಕ್ಷಕವೃಂದ ಮತ್ತು ಪೋಷಕರು ಅಭಿನಂದಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಶುಭಹಾರೈಸಿದ್ದಾರೆ .


Previous Post Next Post