ಕಲ್ಲಾರೆ ಗಣಪತಿ ಹಾಗೂ ಮಾಧವ ದೇವಸ್ಥಾನದಲ್ಲಿ ಇಂದು ಮತ್ತು ನಾಳೆ ವಿಶೇಷ ಪೂಜೆ..
ತೀರ್ಥಹಳ್ಳಿ : ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರಾದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕರಕಮಲ ಸಂಜಾತರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಲೋಕಾನುಗ್ರಹದಿಂದ ದಿನಾಂಕ 12-08-2025 ನೇ ಮಂಗಳವಾರದಂದು "ಶ್ರಾವಣ ಮಾಸದ ಅಂಗಾರಕ ಸಂಕಷ್ಟ ಚತುರ್ಥಿ” ಯ ಪ್ರಯುಕ್ತ ಪಟ್ಟಣದ ರಥಬೀದಿ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀ ಮಾಧವ ದೇವಸ್ಥಾನದಲ್ಲಿ “ಆಯುತ ಸಂಖ್ಯಾ ಮೋದಕ ಗಣಹೋಮ" ವನ್ನು ನಡೆಸಲು ಸಂಕಲ್ಪಸಿದ್ದು, ತಾವುಗಳು ಈ ಮಹತ್ಥಾರ್ಯದಲ್ಲಿ ಭಾಗವಹಿಸಿ, ಶ್ರೀ ದೇವರ ಕೃಪಾನುಗ್ರಹಕ್ಕೆ ಪಾತ್ರರಾಗಲು ದೇವಸ್ಥಾನದ ಅಧ್ಯಕ್ಷರು ಮತ್ತು ಸದಸ್ಯರು, ತಿಳಿಸಿದ್ದಾರೆ.
ಕಾರ್ಯಕ್ರಮಗಳು ಏನೇನು..!?
ದಿನಾಂಕ - 11-8-25 ಸೋಮವಾರ ಬೆಳಗ್ಗೆ 9:30 ಕ್ಕೆ
ಶ್ರೀ ಗುರುದೇವತಾ ಪ್ರಾರ್ಥನೆ, ಶ್ರೀರಾಮೇಶ್ವರ ದೇವರಿಗೆ ಶತರುದ್ರಾಭಿಷೇಕ, ಶ್ರೀ ಮಾಧವ ದೇವರಿಗೆ ಶಾಕಲಋಕ್ ಸಂಹಿತಾಭಿಷೇಕ ನಂತರ ಮಹಾಪೂಜೆ, ಪ್ರಸಾದ ವಿನಿಯೋಗ, ಸಂಜೆ 6: 30ಕ್ಕೆ ಪಂಚ ದುರ್ಗದೀಪ ನಮಸ್ಕಾರ ನಡೆಯಲಿದೆ.
ದಿನಾಂಕ - 12-8-25 ಮಂಗಳವಾರ ಬೆಳಗ್ಗೆ 8:30 ಕ್ಕೆ ದೇವತಾ ಪ್ರಾರ್ಥನೆ , ಪುಣ್ಯಹವಾಚನ , ಆಯುತಾ ಸಂಖ್ಯಾ ಮೋದಕ ಗಣಹೋಮ, 11:30 ಕ್ಕೆ ಪೂರ್ಣಹುತಿ ಪ್ರಸಾದ ವಿನಿಯೋಗ, ಇದೆ ದಿನ ಕಲ್ಲಾರೆ ಗಣಪತಿ ದೇವರಿಗೆ ಲಕ್ಷ ದೂರ್ವರ್ಚನೆ ನಡೆಯಲಿದೆ.
ವಿಶೇಷ ಸೂಚನೆ- ಅಂಗಾರಕ ಸಂಕಷ್ಟಹರ ಚತುರ್ಥಿಯ ಪ್ರಯುಕ್ತ ಕಲ್ಲಾರೆ ಗಣಪತಿ ದೇವಸ್ಥಾನದಲ್ಲಿ ಸಂಪನ್ನಗೊಳ್ಳುವ ಲಕ್ಷ ದೂರ್ವರ್ಚನೆಗೆ ಭಕ್ತಾದಿಗಳು ದೂರ್ವೆ ( ಗರಿಕೆ) ಯಥೇಚ್ಛವಾಗಿ ನೀಡಿ, ಅರ್ಚನೆ ಸೇವೆಯನ್ನು ಮಾಡಿಸಬಹುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ..
Tags:
ಧಾರ್ಮಿಕ ಸುದ್ದಿ