ತೀರ್ಥಹಳ್ಳಿ - ಧರ್ಮಸ್ಥಳ ಧರ್ಮ ರಕ್ಷಣಾ ಯಾತ್ರೆಯಲ್ಲಿ ದಾಖಲೆ ಬರೆದ ರಮೇಶ್ - ಪ್ರಶಾಂತ್ ಜೋಡಿ
ನೂರೈವತ್ತು ಕಿ.ಮೀ ಮೈಕ್ ಅನೌನ್ಸ್ ಮೆಂಟ್ ಮಾಡಿ ಹೊಸ ದಾಖಲೆ
ತೀರ್ಥಹಳ್ಳಿ : ಧರ್ಮಸ್ಥಳದಲ್ಲಿ ನಡೆಯುತ್ತಿರುವ ಘಟನೆ ಖಂಡಿಸಿ ಹಾಗೂ ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿಗಳ ವಿರುದ್ಧ ನಡೆಸುತ್ತಿರುವ ಷಡ್ಯಂತ್ರ ವಿರುದ್ಧ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ನಡೆದ ಧರ್ಮ ರಕ್ಷಣಾ ಯಾತ್ರೆಯಲ್ಲಿ ಒಂದೆಡೆ 200 ಕ್ಕೂ ಹೆಚ್ಚು ಕಾರುಗಳು ಸಂಚರಿಸಿದ್ದು ವಿಶೇಷವಾದರೆ ಮತ್ತೊಂದೆಡೆ ನೂರೈವತ್ತು ಕಿ.ಮೀಗಳ ದೂರದವರೆಗೂ ಮೈಕ್ ಅನೌನ್ಸ್ ಮೆಂಟ್ ಮಾಡಿ ರಮೇಶ್ ದಾಖಲೆ ಬರೆದಿದ್ದಾರೆ.
ರಮೇಶ್ ತೀರ್ಥಹಳ್ಳಿ ಜನತೆಗೆ ಚಿರಪರಿಚಿತರು. ರಾಮೇಶ್ವರ ದೇವಸ್ಥಾನದ ಕಾರ್ಯಕ್ರಮ, ಮಾರಿಕಾಂಬಾ ದೇವಸ್ಥಾನದ ಕಾರ್ಯಕ್ರಮ, ರಾಜಕೀಯ ಪಕ್ಷಗಳ ಕಾರ್ಯಕ್ರಮ ಹಾಗೆಯೇ ಖಾಸಗಿ ಜಾಹಿರಾತು ಬಗ್ಗೆ ರಮೇಶ್ ಮಾತನಾಡುವ ಸ್ಪಷ್ಟ ಕನ್ನಡ ತೀರ್ಥಹಳ್ಳಿಗೆ ಜನಪ್ರಿಯ. ಮೆಟ್ರೋ ರೈಲಿನಲ್ಲಿ ಅಪರ್ಣ ಅವರ ಕನ್ನಡ ಸ್ಪಷ್ಟತೆಗೂ ರಮೇಶ್ ಮಾತನಾಡುವ ಕಂಚಿನ ಕಂಠದ ಶೈಲಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂಬ ಮಾತು ಕೂಡ ಇದೆ.
ಆದರೆ ತೀರ್ಥಹಳ್ಳಿಯಿಂದ ಧರ್ಮಸ್ಥಳ ಕ್ಷೇತ್ರದವರೆಗೆ ನಡೆದ ಧರ್ಮ ರಕ್ಷಣಾ ಯಾತ್ರೆಯಲ್ಲಿ ಸ್ಪಷ್ಟ ಕನ್ನಡದ ಜೊತೆಗೆ "ಧರ್ಮಸ್ಥಳದ ಮಂಜುನಾಥ ಸ್ವಾಮಿ" ಎಂದು ಹೇಳುವ ರೀತಿ ಎಲ್ಲರು ಆ ಕಾರಿನ ಕಡೆ ಮುಖ ಮಾಡುವಂತೆ ಮಾಡುತ್ತಿತ್ತು. ಬರೋಬ್ಬರಿ 150 ಕಿ ಮೀ ದೂರ ಅನೌನ್ಸ್ ಮೆಂಟ್ ಮಾಡಿ ಹೊಸದೊಂದು ದಾಖಲೆ ಬರೆದಿದ್ದಾರೆ. ತೀರ್ಥಹಳ್ಳಿಯಿಂದ ಆರಂಭವಾಗಿದ್ದ ಈ ಯಾತ್ರೆ ಹಳ್ಳಿ ಹಳ್ಳಿಯ ಜನರು ರಸ್ತೆ ಬದಿ ಬಂದು ನೋಡುವಂತೆ ಮಾಡಿದ್ದು ರಮೇಶ್ ಅವರ ಅನೌನ್ಸ್ ಮೆಂಟ್ ಎಂದರೂ ತಪ್ಪಾಗಲ್ಲ..
ಹತ್ತು ನಿಮಿಷಗಳ ಕಾಲ ಮಾತನಾಡಿದರು ವಾಯ್ಸ್ ನಲ್ಲಿ ವ್ಯತ್ಯಾಸ ಕಂಡು ಬರುವ ಈಗಿನ ಸಂದರ್ಭದಲ್ಲಿ ಒಂದೇ ರೀತಿ 150 ಕಿ ಮೀ ಸಂಚರಿಸಿ ತೀರ್ಥಹಳ್ಳಿ ಹೆಸರನ್ನು, ತೀರ್ಥಹಳ್ಳಿಯ ಜನಪ್ರಿಯ ಶಾಸಕರಾದ ಆರಗ ಜ್ಞಾನೇಂದ್ರ ಎಂಬ ಹೆಸರನ್ನು ಘಂಟಾಘೋಷವಾಗಿ ಘಟ್ಟದ ಕೆಳಗಿನ ಜನರಿಗೂ ಕೇಳುವಂತೆ ಮಾಡಿದ್ದಾರೆ. ಅಷ್ಟು ದೂರ ಸಂಚರಿಸಿ ಅನೌನ್ಸ್ ಮಾಡಿದರು ಅವರ ವಾಯ್ಸ್ ನಲ್ಲಿ ಸ್ವಲ್ಪ ಬದಲಾವಣೆ ಸಹ ಆಗಲಿಲ್ಲ. ಅದ್ಬುತ ಕನ್ನಡ ಮಾತನಾಡಿ ಜನಪ್ರಿಯತೇ ಪಡೆದಿರುವ ರಮೇಶ್ ಅವರಿಗೆ ಶ್ರೀ ಮಂಜುನಾಥ ಸ್ವಾಮಿ ಒಳ್ಳೆಯದನ್ನು ಮಾಡಲಿ ಎಂಬುದೇ ನಮ್ಮ ಆಶಯ.
ರಮೇಶ್ ಅವರ ಧ್ವನಿ ಇಲ್ಲಿದೆ ನೋಡಿ 👇
ಓಮಿನಿ ಕಾರು ಓಡಿಸಿ ದಾಖಲೆ ಬರೆದ ಪ್ರಶಾಂತ್..!
ರಮೇಶ್ ಅವರ ಅನೌನ್ಸ್ ಮೆಂಟ್ ಎಂದರೆ ಅಲ್ಲಿ ಪ್ರಶಾಂತ್ ಅವರ ಕಾರು ಇರಲೇಬೇಕು. ಹಾಗೆ ಧರ್ಮ ರಕ್ಷಣಾ ಯಾತ್ರೆಯಲ್ಲೂ ಸಹ ಪ್ರಶಾಂತ್ ಅವರು ಓಮಿನಿ ಕಾರಿತ್ತು. 150 ಕಿ. ಮೀ ದೂರ 200 ಕ್ಕೂ ಹೆಚ್ಚು ಬೇರೆ ಬೇರೆ ಕಂಪನಿಗಳ ಕಾರುಗಳಿದ್ದರು ಅದೇ ವೇಗದಲ್ಲಿ ಚಾಲನೆ ಮಾಡುವ ಮೂಲಕ ನಿನ್ನೆ ಓಮಿನಿ ಕಾರು ಸಹ ಈ ರೀತಿ ಹೋಗಬಹುದು ಎಂದು ತೋರಿಸಿಕೊಟ್ಟರು. ಪ್ರಶಾಂತ್ ಅವರಿಗೂ ಶ್ರೀ ಮಂಜುನಾಥ ಸ್ವಾಮಿ ಒಳ್ಳೆಯದನ್ನ ಮಾಡಲಿ ಎಂದು ಹಾರೈಸುತ್ತೇವೆ.
ವಿಶೇಷ ವರದಿ : ಅಕ್ಷಯ್ ಕುಮಾರ್