ಮಾಳೂರಿನಲ್ಲಿ ಕುಸಿಯುತ್ತಿರುವ ರಸ್ತೆ..!
ತೀರ್ಥಹಳ್ಳಿ : ರಸ್ತೆಯ ಅಕ್ಕಪಕ್ಕ ಎರಡು ಕಡೆ ಹೊಂಡ ಬಿದ್ದು ರಸ್ತೆ ಕುಸಿಯುತ್ತಿರುವ ಘಟನೆ ತಾಲೂಕಿನ ಮಾಳೂರಿನಲ್ಲಿ ನಡೆದಿದೆ.
ಬೆಜ್ಜವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾಳೂರಿನಿಂದ
ಮಹಿಷಿ,ಬಾಳಗಾರು, ಅಂದಗೆರೆ, ಹಾಲು ಮಹಿಷಿ ಹೋಗುವ ರಸ್ತೆ ಮಾರ್ಗದ ಮಧ್ಯದಲ್ಲಿ ಮೋರಿ ಹಾಕಲಾಗಿದ್ದು ಈಗ ಎರಡು ಬದಿಯಲ್ಲಿ ಹೊಂಡ ಬಿದ್ದು ಕುಸಿಯಲು ಆರಂಭಿಸಿದೆ. ಈಗಾಗಲೇ ಬಾರಿ ವಾಹನ ಓಡಾಡಲು ಆಗುತ್ತಿಲ್ಲ.
ಹೀಗೆ ಮುಂದುವರೆದರೆ ಓಡಾಟಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ