ಮನನೊಂದು ದಂಪತಿಗಳಿಬ್ಬರು ಸಾವು.!

ಮನನೊಂದು ದಂಪತಿಗಳಿಬ್ಬರು ಸಾವು
ತೀರ್ಥಹಳ್ಳಿ : ಮನೆಗಾಗಿ ಸಾಲ ಮಾಡಿಕೊಂಡಿದ್ದ ದಂಪತಿಗಳು, ಮನೆಯಲ್ಲಿ ನಡೆದ ಸಣ್ಣ ಪುಟ್ಟ ಕಿರಿ ಕಿರಿಯಿಂದಾಗಿ ಮನನೊಂದು ಮರಕ್ಕೆ ನೇ*ಣು ಹಾಕಿಕೊಂಡು ಆತ್ಮಹ*ತ್ಯೆಗೆ ಶರಣಾದ ಘಟನೆ ಮಾಳೂರು ವ್ಯಾಪ್ತಿಯಲ್ಲಿ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಬಿಳುವೆ ಗ್ರಾಮದ ಕಣಬೂರು ಸಮೀಪದ ಹಲ್ಯಾಪುರ ಎಂಬಲ್ಲಿ ದಂಪತಿಗಳಿಬ್ಬರು ಮನೆಯಿಂದ 200 ಮೀ ದೂರದ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡ ನಾಯ್ಕ್ (72 ವರ್ಷ ) ಲಕ್ಷ್ಮಮ್ಮ (58 ವರ್ಷ ) ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು.

ಮನೆಗಾಗಿ ಸಾಲ ಮಾಡಿಕೊಂಡಿದ್ದರು. ಇದನ್ನು ಮನೆಯಲ್ಲಿ ಪ್ರೆಶ್ನೆ ಮಾಡಿದ್ದಾರೆ. ಇದರಿಂದ ಮನೆಯಲ್ಲಿ ಕಿರಿ ಕಿರಿ ಉಂಟಾಗಿದೆ. ಮನನೊಂದ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Previous Post Next Post