ತೀರ್ಥಹಳ್ಳಿ ತಾಲೂಕಿನಲ್ಲಿ ಇಂದು ಶಾಲೆಗೆ ರಜೆ ಇಲ್ಲ - ಆದೇಶ ಪ್ರತಿ ತಿದ್ದಿದ ಕಿಡಿಗೇಡಿಗಳು..! Tth

 ತೀರ್ಥಹಳ್ಳಿ ತಾಲೂಕಿನಲ್ಲಿ ಇಂದು ಶಾಲೆಗೆ ರಜೆ ಇಲ್ಲ - ಆದೇಶ ಪ್ರತಿ ತಿದ್ದಿದ ಕಿಡಿಗೇಡಿಗಳು..!



ತೀರ್ಥಹಳ್ಳಿ : ಮಳೆಯ ಕಾರಣದಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಇದೆ ಎಂದು ಆದೇಶ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಇದರಿಂದ ಎಲ್ಲಾ ಮಾಧ್ಯಮಗಳು ಸಹ ತೀರ್ಥಹಳ್ಳಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಇದೆ ಎಂದು ಸುದ್ದಿ ಮಾಡಿದ್ದರು.ಆದರೆ ಶಾಲಾ ಕಾಲೇಜುಗಳಿಗೆ ರಜೆ ನೀಡಿಲ್ಲವೆಂದು ತಾಲೂಕು ಆಡಳಿತ ಸ್ಪಷ್ಟನೆ ನೀಡಿದೆ.

ಕಳೆದ ಎರಡು ಮೂರು ದಿನಗಳಿಂದ ತಾಲೂಕು ಆಡಳಿತದ ಆದೇಶ ಪ್ರತಿ ದಿನಾಂಕವನ್ನು ಮಾತ್ರ ಬದಲಾವಣೆ ಮಾಡಲಾಗುತ್ತಿತ್ತು. ಇದನ್ನು ಯಾರು ಕಿಡಿಗೇಡಿಗಳು ದಿನಾಂಕವನ್ನು ಮಾತ್ರ ಬದಲಾಯಿಸಿ ರಜೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆದೇಶ ಪ್ರತಿಯನ್ನು ಹರಿಬಿಟ್ಟಿದ್ದಾರೆ. ಇದರಿಂದ ಮಾಧ್ಯಮಗಳಲ್ಲೂ ವರದಿಯಾಗಿ ಸ್ವಲ್ಪ ಮಟ್ಟಿಗೆ ಗೊಂದಲ ಉಂಟಾಗಿತ್ತು. ಆದರೆ ಇಂದು ಶಾಲಾ-ಕಾಲೇಜುಗಳಿಗೆ ರಜೆ ಇಲ್ಲವೆಂದು ತಾಲೂಕು ಆಡಳಿತ ಸ್ಪಷ್ಟವಾಗಿ ತಿಳಿಸಿದೆ.


ಇನ್ನು ಮುಂದೆ ಯಾರೇ ಆದರೂ ಇಂತಹ ಕೃತ್ಯ ಎಸಗಿದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮಾನ್ಯ ದಂಡಾಧಿಕಾರಿಗಳು ತಿಳಿಸಿದ್ದಾರೆ

Previous Post Next Post