ಅತಿಯಾದ ಮಳೆಯಿಂದ ಕುಸಿದ ಭೂಮಿ - ಅಧಿಕಾರಿಗಳ ಕೆಲಸಕ್ಕೆ ಶಭಾಷ್ ಎಂದ ಸಾರ್ವಜನಿಕರು..! TTH

ಅತಿಯಾದ ಮಳೆಯಿಂದ ಕುಸಿದ ಭೂಮಿ - ಅಧಿಕಾರಿಗಳ ಕೆಲಸಕ್ಕೆ ಶಭಾಷ್ ಎಂದ ಸಾರ್ವಜನಿಕರು..!


ತೀರ್ಥಹಳ್ಳಿ : ಪಟ್ಟಣದ ಸಂತೆ ಮಾರ್ಕೆಟ್ ರಸ್ತೆಯಲ್ಲಿರುವ ಕೆನರಾ ಕಂಪ್ಯೂಟರ್ ಮಳಿಗೆ ಮುಂಭಾಗ ಚರಂಡಿ ಪಕ್ಕದಲ್ಲಿ  ಹಾಕಲಾಗಿದ್ದ ಇಂಟರ್ ಲಾಕ್ ಏಕಏಕಿ ಕುಸಿದು ಬಿದ್ದಿದೆ.

ಕಳೆದ ವರ್ಷ ಇಂಟರ್ ಲಾಕ್ ಅಳವಡಿಕೆ ಮಾಡಲಾಗಿತ್ತು. 
ಆದರೆ  ಮಧ್ಯದಲ್ಲಿ ಭೂಮಿ ಕುಸಿದು ಇಂಟರ್ ಲಾಕ್ ಸಮೇತ ಬಾಯಿ ತೆರೆದು ಕುಳಿತಿದೆ. ಈಗಾಗಲೇ ಕುಸಿದು ತಿಂಗಳು ಆಯಿತು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದು ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ಯಾರದರು ಹೊಂಡಕ್ಕೆ ಬಿದ್ದರೆ ಹೊಣೆ ಯಾರು? ಎಂದು ಪ್ರೆಶ್ನೆ ಮಾಡುತ್ತಿದ್ದಾರೆ.

ವರ್ಷವಾಗುವುದರ ಒಳಗೆ ಮಾಡಿರುವ ಕೆಲಸ ಹಾಳಾಗುತ್ತದೆ ಎಂದಾದರೆ ಅಧಿಕಾರಿಗಳ ಕೆಲಸಕ್ಕೆ ಶಭಾಷ್ ಎನ್ನಬೇಕು ಎಂದು ಅಲ್ಲಿನ ಸ್ಥಳೀಯರು ವ್ಯಂಗ್ಯವಾಡಿದ್ದಾರೆ.



Previous Post Next Post