ಕಾರ್ಪೂರೇಷನ್ ಬ್ಯಾಂಕ್ ಎದುರು ಅನಾಮಧೇಯ ಕಾರು ಪತ್ತೆ..!
ಸೈರನ್ ಹೊಡೆದುಕೊಳ್ಳುತ್ತಿರುವ ಕಾರು..!
ತೀರ್ಥಹಳ್ಳಿ : ಪಟ್ಟಣದ ಕೊಪ್ಪ ಸರ್ಕಲ್ ಸಮೀಪದ
ಕಾರ್ಪೂರೇಷನ್ ಬ್ಯಾಂಕ್ ಎದುರು ಅನಾಮಧೇಯ ಕಾರೊಂದು ನಿಂತಿದ್ದು ಕಾರನ್ನು ಯಾರಾದರೂ ಮುಟ್ಟಿದರೆ ಸಾಕು ಸದ್ದು ಮಾಡುತ್ತಿದೆ. ಈ ಕಾರು ಇಂದು ಬೆಳಗಿನ ಜಾವದಿಂದ ನಿಂತಿದ್ದು ಅಕ್ಕಪಕ್ಕದ ಅಂಗಡಿಯವರಿಗೆ ಕಿರಿ ಕಿರಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಾರು ಯಾರದ್ದು? ಯಾಕೆ ನಿಲ್ಲಿಸಿದ್ದಾರೆ? ಕಾರನ್ನು ಆದಷ್ಟು ಬೇಗ ಸ್ಥಳಾಂತರ ಮಾಡಲು ಪಟ್ಟಣದ ಸಾರ್ವಜನಿಕರಿಂದ ಮಾತು ಕೇಳಿ ಬಂದಿದೆ. ಸಂಬಂಧಪಟ್ಟ ಇಲಾಖೆ ತಕ್ಷಣವೇ ಗಮನಿಸಿ ಜನರಿಗೆ ಇದರಿಂದ ಆಗುತ್ತಿರುವ ಕಿರಿ ಕಿರಿ ತಪ್ಪಿಸಬೇಕಿದೆ.