ತೀರ್ಥಹಳ್ಳಿ ಜಯಚಾಮರಾಜೇಂದ್ರ ಆಸ್ಪತ್ರೆಯಿಂದ ಆರು ವೈದ್ಯರ ನಿರ್ಗಮನ - ಐವರು ವೈದ್ಯರ ಆಗಮನ Tth Hospaital

ತೀರ್ಥಹಳ್ಳಿ ಜಯಚಾಮರಾಜೇಂದ್ರ ಆಸ್ಪತ್ರೆಯಿಂದ ಆರು ವೈದ್ಯರ ನಿರ್ಗಮನ - ಐವರು ವೈದ್ಯರ ಆಗಮನ

ಇಬ್ಬರು ವೈದ್ಯರನ್ನು ಶಾಶ್ವತ ಮಾಡದಿದ್ದರೆ ಮುಂದಿನ ಸೋಮವಾರ ಮತ್ತೆ ಪ್ರತಿಭಟನೆ- ಶಾಸಕ ಆರಗ ಜ್ಞಾನೇಂದ್ರ


ತೀರ್ಥಹಳ್ಳಿ : ತಾಲೂಕಿನ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರು ಮಂದಿ ವೈದ್ಯರನ್ನು ಏಕಾಏಕಿ ವರ್ಗಾವಣೆ ಮಾಡಿದ್ದು ಇದನ್ನು ಖಂಡಿಸಿ ನಾಗರೀಕ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಯಿತು.

ಆಸ್ಪತ್ರೆಯಲ್ಲಿದ್ದ ಅನಸ್ತೇಷಿಯ ತಜ್ಞರಾದ ಡಾ. ಗಣೇಶ್ ಭಟ್, ಮಕ್ಕಳ ತಜ್ಞರಾದ ಡಾ. ಪ್ರಭಾಕರ್, ಮೂಳೆ ತಜ್ಞರಾದ ಡಾ. ನಿಶ್ಚಲ್, ಕಣ್ಣಿನ ತಜ್ಞರಾದ ಡಾ. ಮಹಿಮಾ, ಕಿವಿ ಮೂಗು ಗಂಟಲು ತಜ್ಞರಾದ ಡಾ. ರವಿಕುಮಾರ್ ಹಾಗೂ ಹಲ್ಲಿನ ತಜ್ಞರಾದ ಡಾ. ಗುರುರಾಜ್ ಒಟ್ಟು ಆರು ಮಂದಿ ವೈದ್ಯರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಈ ವಿಚಾರವಾಗಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಇಬ್ಬರು ಸಹ ಆರೋಗ್ಯ ಮಂತ್ರಿಗಳ ಬಳಿ ಚರ್ಚೆ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನ ಆಗದ ಕಾರಣದಿಂದ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಎಲ್ಲಾದರ ಮಧ್ಯೆ  ಆರು ವೈದ್ಯರ ನಿರ್ಗಮನವಾದರೆ ಅವರ ಸ್ಥಾನಕ್ಕೆ ಐವರು ವೈದ್ಯರ ನೇಮಕದ ಆದೇಶ ಬುಧವಾರ ರಾತ್ರಿ ಹೊರಬಿತ್ತು. ಆದರೆ ಅದರಲ್ಲಿ ಮೂವರು ವೈದ್ಯರನ್ನು ಶಾಶ್ವತವಾಗಿ ನೇಮಿಸಿದ್ದರೆ ಇಬ್ಬರನ್ನು ತಾತ್ಕಾಲಿಕವಾಗಿ ನೇಮಕ ಮಾಡಲು ಆದೇಶ ಮಾಡಲಾಗಿತ್ತು. ಇದರಿಂದ ಇಂದು ಪ್ರತಿಭಟನೆ ನಡೆಸಿ ಎಲ್ಲರನ್ನು ಶಾಶ್ವತ ಮಾಡಬೇಕು ಇಲ್ಲದಿದ್ದರೆ ಇರುವ ವೈದ್ಯರನ್ನು ಕಳುಹಿಸಲು ಆಗುವುದಿಲ್ಲ, ಹಾಗೂ ಸ್ಥಳಕ್ಕೆ ಜಿಲ್ಲಾ ವೈದ್ಯಾಧಿಕಾರಿ ಬರಬೇಕು ಎಂದು ಪ್ರತಿಭಟನೆ ನಡೆಸಲಾಯಿತು.

ನಂತರ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಬಂದು ಮಾತನಾಡಿ
ನಮ್ಮ ಆಸ್ಪತ್ರೆಗೆ ಶಾಶ್ವತ ವೈದ್ಯರು ಬೇಕಾಗಿದ್ದಾರೆ. ಇಲ್ಲ ಎಂದರೆ ಇಲ್ಲಿರುವ ವೈದ್ಯರನ್ನ ಕಳುಹಿಸಲು ಆಗುವುದಿಲ್ಲ,
ಇನ್ನೆರಡು ದಿನಗಳಲ್ಲಿ ಇಬ್ಬರು ವೈದ್ಯರನ್ನು ಶಾಶ್ವತ ಮಾಡಲು ಆದೇಶ ಬರುತ್ತದೆ ಎಂದು ಹೇಳಿದ್ದಾರೆ. ಹಾಗೇನಾದ್ರೂ ಆಗಿಲ್ಲ ಎಂದರೆ ಮುಂದಿನ ಸೋಮವಾರ ಮತ್ತೊಮ್ಮೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ವೈದ್ಯಾಧಿಕಾರಿ ನಟರಾಜ್ ಮಾತನಾಡಿ ನಾನು ಸಹ ಇದೆ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದೇನೆ. ಹಾಗಾಗಿ ವೈದ್ಯರು ಎಷ್ಟು ಅವಶ್ಯಕ ಎಂಬುದು ತಿಳಿದಿದೆ. ಈಗ ಒಟ್ಟು ಐದು ಮಂದಿ ವೈದ್ಯರು ನೇಮಕ ಆಗಿದ್ದಾರೆ ಅದರಲ್ಲಿ ಇಬ್ಬರನ್ನು ಶಾಶ್ವತವಾಗಿ ನೇಮಕ ಮಾಡಲು ಕಮಿಷನರ್ ಬಳಿ ಮಾತನಾಡಿದ್ದೇನೆ. ಈಗಿರುವ ವೈದ್ಯರು ಆಸ್ಪತ್ರೆಯ ಹುದ್ದೆಯಿಂದ ಬಿಡುಗಡೆಯಾಗುವ ಮತ್ತು ಹೊಸ ವೈದ್ಯರು ಅಧಿಕಾರ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದ್ದು ಇನ್ನೊಂದು ವಾರ ಜನ ಸಾಮಾನ್ಯರ ಚಿಕಿತ್ಸೆ ಸಂದರ್ಭದಲ್ಲಿ ಏರುಪೇರಾಗಲಿದೆ. ಇದರಲ್ಲಿ ಕಣ್ಣಿನ ತಜ್ಞರ ನೇಮಕ ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಅವರ ನೇಮಕಾತಿ ಸಹ ಸಂಪೂರ್ಣಗೊಳ್ಳಲಿದೆ. ಎಂದರು.

ಹಾಗಾದ್ರೆ ಹೊಸ ವೈದ್ಯರು ಯಾರ್ಯಾರು..!?

ದಂತ ತಜ್ಞರು - ಡಾ. ಕೆ ನಾಗೇಶ್ ಕುಮಾರ್ ( ಮೈಸೂರಿಂದ ಕೌನ್ಸಿಲಿಂಗ್‌ ಮೂಲಕ)

ಮಕ್ಕಳ ತಜ್ಞರು- ಡಾ. ಸುಪ್ರೀತ್ ( ಅನವಟ್ಟಿಯಿಂದ ವರ್ಗಾವಣೆ )

ಅರವಳಿಕೆ ತಜ್ಞರು - ಡಾ.ವಿನಯ್ (ಹೊಳಲೂರುನಿಂದ ವರ್ಗಾವಣೆ )

ಇ.ಏನ್.ಟಿ ತಜ್ಞರು - ಡಾ. ಕವಿತಾ ( ಭದ್ರಾವತಿಯಿಂದ ಕೌನ್ಸಿಲಿಂಗ್‌ ಮೂಲಕ)

ಮೂಳೆ ತಜ್ಞರು - ಡಾ.ಗಣೇಶ್ ನಾಯಕ್ ( ಉಡುಪಿಯಿಂದ ಕೌನ್ಸಿಲಿಂಗ್‌ ಮೂಲಕ)

ಒಟ್ಟು ಐದು ಮಂದಿ ವೈದ್ಯರ ಆಗಮನವಾಗಿದೆ. ಆದರೆ ಹಿಂದೆ ಇದ್ದಂತಹ ಆರು ಮಂದಿ ವೈದ್ಯರು ವರ್ಗಾವಣೆ ಆಗಿದ್ದು ಅದರಲ್ಲೂ ಪ್ರಮುಖವಾಗಿ ಡಾ. ಗಣೇಶ್ ಭಟ್ ಹಾಗೂ ಡಾ. ಪ್ರಭಾಕರ್ ಅವರ ಚಿಕಿತ್ಸೆ ಕೆಲಸಗಳು ತೀರ್ಥಹಳ್ಳಿ ಜನತೆ ಮರೆಯದಂತೆ ಕಾಣಿಸುತ್ತದೆ. ಮುಂದೆ ಬರುವ ವೈದ್ಯರು ಹೀಗೆ ಜನಮನ್ನಣೆ ಪಡೆಯಲಿ ಎಂಬುದೇ ಆಶಯ..



Previous Post Next Post