ಅಂಗನವಾಡಿ ಬಳಿ ಬಂದ ನಾಗಪ್ಪ - ಪುಟಾಣಿ ಮಕ್ಕಳ ಜೊತೆಗೆ ಪೋಷಕರು ಕಂಗಾಲು
ತೀರ್ಥಹಳ್ಳಿ : ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿಠಲನಗರದ ಅಂಗನವಾಡಿಯೊಳಗೆ ನಾಗರಹಾವೊಂದು ಕಂಡು ಬಂದಿದ್ದು ಇದನ್ನು ನೋಡಿದ ಪೋಷಕರು ಹಾಗೂ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಅಂಗನವಾಡಿಯಲ್ಲಿ ಪುಟಾಣಿ ಮಕ್ಕಳು ಅವರಣದ ಒಳಗೆ ಆಟ ಆಡುತ್ತಿರುತ್ತಾರೆ. ಅಂಗನವಾಡಿ ಅವರಣದ ಒಳಗೆ ಮಳೆಗಾಲ ಆದ ಕಾರಣ ವಿಪರೀತ ಗಿಡ ಗಂಟಿಗಳು, ಹುಲ್ಲು ಇತ್ಯಾದಿಗಳು ಹುಟ್ಟಿದ್ದು ಹಾವು ಬಂದರೂ ಕಾಣದ ಪರಿಸ್ಥಿತಿ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪುಟಾಣಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಏನಾದರು ಅಪಾಯವಾಗುವ ಮುನ್ನ ಗಿಡ ಗಂಟಿಗಳನ್ನು ತೆರವು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿದ್ದಾರೆ.
ಅಂಗನವಾಡಿ ಪಕ್ಕದಲ್ಲಿ ಶಾಲೆ ಸಹ ಇದ್ದು ಶಾಲಾ ಅವರಣದಲ್ಲೂ ಗಿಡ ಗಂಟಿಗಳು ಬೆಳೆದಿವೆ. ಕೊಡಲೇ ತೆರವುಗೊಳಿಸಲು ಪೋಷಕರು ಮನವಿ ಮಾಡಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ