ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳ ಚಕ್ಕರ್ - ಬಸ್ ನಿಲ್ದಾಣಕ್ಕೆ ಬಂದು ಕಾಲೇಜಿಗೆ ಕರೆದೋಯ್ದ ಪ್ರಿನ್ಸಿಪಾಲ್..!
ತೀರ್ಥಹಳ್ಳಿ: ಶಾಲಾ / ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿರುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆ ಅಥವಾ ಕಾಲೇಜಿಗೆ ಹಾಜರಾಗದೆ ಬಸ್ ನಿಲ್ದಾಣದಲ್ಲಿ ಹಾಗೂ ಇತರ ಕಡೆ ಸುಖಾ ಸುಮ್ಮನೆ ಕಾಲಹರಣ
ಮಾಡುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ಜೂನಿಯರ್ ಕಾಲೇಜು ಪ್ರಿನ್ಸಿಪಾಲರಾದ ಪ್ರೊ. ಸುಧಾ ಅವರು ಖುದ್ದಾಗಿ ತಮ್ಮ ಸಿಬ್ಬಂದಿ ಜತೆ ಬಸ್ ನಿಲ್ದಾಣಕ್ಕೆ ಬಂದು ಪರಿಶೀಲಿಸಿ ಕೆಲ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ.
ಪ್ರತಿನಿತ್ಯ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗದೆ ಬಸ್ ನಿಲ್ದಾಣ, ಪಾರ್ಕ್, ಬೇಕರಿ, ಕೆಫೆಗಳಲ್ಲಿ ದಿನವಿಡೀ ಕಾಲ ಕಳೆಯುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮನೆಯಲ್ಲಿ ಕಾಲೇಜಿಗೆ ಬರುವುದಾಗಿ ಹೇಳಿ ಕಾಲೇಜಿಗೆ ಹೋಗದೆ ಇರುವ ಬಗ್ಗೆ ಪ್ರತಿ ದಿನ
ದೂರು ಬರುತ್ತಿದ್ದವು. ಮೊಬೈಲ್ ಅಲ್ಲಿ ಗೇಮ್, ರೀಲ್ಸ್ ಹುಚ್ಚಿಗೆ ಕಾಲೇಜಿಗೆ ಹೋಗದೆ ಬಸ್ ನಿಲ್ದಾಣದಲ್ಲೇ ಸಂಜೆವರೆಗೆ ಕುಳಿತು ಮನೆಗೆ ಹೋಗುವುದು ಸಾಮಾನ್ಯವಾಗಿದೆ. ಈ ಬಗ್ಗೆ ಅನೇಕರು ಪೊಲೀಸ್ ಇಲಾಖೆಗೂ ದೂರು ನೀಡಿದ್ದರು.
ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ( ಜೂನಿಯರ್) ಕಾಲೇಜಿನ ಅನೇಕ ವಿದ್ಯಾರ್ಥಿ - ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗದೆ ಶಾಲಾ ಸಮವಸ್ತ್ರ ತೆಗೆದು ಟೀ ಶರ್ಟ್ ಧರಿಸಿ ಬಸ್ ನಿಲ್ದಾಣ, ಕುವೆಂಪು ಶಾಲೆಯ ಅಕ್ಕ ಪಕ್ಕ ಹಾಗೂ ಸುತ್ತಮುತ್ತ ಕುಳಿತ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಿನ್ಸಿಪಾಲರಾದ ಪ್ರೊ. ಸುಧಾ ಅವರು ಬಸ್ ನಿಲ್ದಾಣಕ್ಕೆ
ಬಂದು ಪರಿಶೀಲಿಸಿ ಕೆಲ ವಿದ್ಯಾರ್ಥಿಗಳನ್ನು
ಕರೆದುಕೊಂಡು ಹೋಗಿದ್ದಲ್ಲದೆ ಪೋಷಕರಿಗೂ
ವಿಷಯ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಾಲಾ ಕಾಲೇಜಿಗೆ ಹೋಗುವ ಮಕ್ಕಳ ಬಗ್ಗೆ ಪೋಷಕರು ಗಮನವಹಿಸಬೇಕಿದೆ ಶಾಲಾ ಕಾಲೇಜು, ಭೇಟಿ ನೀಡಿ
ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು.ಇತ್ತೀಚಿಗೆ ಅತಿಯಾದ ಮೊಬೈಲ್ ಬಳಕೆ, ರೀಲ್ಸ್ ಚಟ ವಿದ್ಯಾರ್ಥಿಗಳ ಬದುಕನ್ನು ಹಾಳು ಮಾಡುತ್ತಿದೆ.
Tags:
ತೀರ್ಥಹಳ್ಳಿ ಸುದ್ದಿ