ಸ್ಥಳೀಯ ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನಾರುತ್ತಿದೆ ಚಂದ್ರಗುತ್ತಿ ಕ್ಷೇತ್ರ Soraba

ಸ್ಥಳೀಯ ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನಾರುತ್ತಿದೆ ಚಂದ್ರಗುತ್ತಿ ಕ್ಷೇತ್ರ


ಸೊರಬ : ತಾಲೂಕಿನ ಇತಿಹಾಸ ಪ್ರಸಿದ್ಧ ಚಂದ್ರಗುತ್ತಿ ರೇಣುಕಾದೇವಿ ಕ್ಷೇತ್ರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸ್ವಚ್ಚತೆಗೆ ಪ್ರಾಮುಖ್ಯತೆ ಸಿಗದೇ ಚಂದ್ರಗುತ್ತಿ ಕ್ಷೇತ್ರ ನಾರುತ್ತಿದೆ.
ಚಂದ್ರಗುತ್ತಿಯ ಚರಂಡಿಗಳು, ಕಾಲೋನಿಯ ರಸ್ತೆಗಳು, ಸ್ವಚ್ಛತೆ ಇಲ್ಲದೆ ರೋಗಗಳ ಖಜಾನೆಯಾಗಿವೆ ಎಂದು ಸ್ಥಳೀಯರು ದೂರಿದ್ದಾರೆ.




ಗ್ರಾಮದ ಚರಂಡಿಗಳು, ರಸ್ತೆಗಳು, ಸ್ವಚ್ಛತೆ ಇಲ್ಲದೆ ಕಸದಿಂದ ತುಂಬಿವೆ. ಸಮಸ್ಯೆ ಅಧಿಕಾರಿಗಳ ಗಮನಕ್ಕೆ ತಂದರು 
ಎಚ್ಚೆತ್ತುಕೊಳ್ಳದೆ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.






ಪ್ರತಿನಿತ್ಯ ಸಾವಿರಾರೂ ಭಕ್ತಾಧಿಗಳು ಸೇರುವ ಕ್ಷೇತ್ರವಾಗಿರುವ ಚಂದ್ರಗುತ್ತಿಯಲ್ಲಿ ಗ್ರಾಮದ ಚರಂಡಿಗಳು 
ದುರಸ್ಥಿಕಾಣದಾಗಿದೆ. ದೇವಸ್ಥಾನಕ್ಕೆ ತೆರಳುವ ಮಹಾ ದ್ವಾರದ ಬಳಿ ಚರಂಡಿಯ ಕೊಳೆತ ವಸ್ತುಗಳು, ನೀರು ನಿಂತಿವೆ. ಗ್ರಾಮದಲ್ಲಿ ಸಮಸ್ಯೆ ಇದ್ದರೂ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಅಧಿಕಾರಿಗಳು ತಲೆಕಡಿಸಿಕೊಳ್ಳದ ಕಾರಣದಿಂದ ಹಾಗೂ ಸರಿಯಾದ ರೀತಿ ಕೆಲಸ ಮಾಡದೇ  ಬೇಜವಾಬ್ದಾರಿತನ ತೋರುತ್ತಿರುವ ಅಧಿಕಾರಿಗಳಿಗೆ
ಸಾರ್ವಜನಿಕರ ಹಿಡಿ ಶಾಪ ಹಾಕುತ್ತಿದ್ದಾರೆ.



Previous Post Next Post