ಕೊಚ್ಚಿ ಹೋಗುವ ಪರಿಸ್ಥಿತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ..!
ತೀರ್ಥಹಳ್ಳಿ : ಪುನರ್ವಸು ಮಳೆಯ ಅಬ್ಬರಕ್ಕೆ ಸೇತುವೆಯೊಂದು ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗಿರುವ ಘಟನೆ ಸಾಲೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಸಾಲೂರು ಗ್ರಾಮ ಪಂಚಾಯತಿಯ ಕುನ್ನಿಕೇವಿ ಸೇತುವೆಯಲ್ಲಿ ಈಗಾಗಲೇ ಹೊಂಡ ಗುಂಡಿಗಳೆಲ್ಲಾ ಬಿದ್ದು ಕೊಚ್ಚಿ ಹೋಗುವ ಪರಿಸ್ಥಿತಿ ಇದ್ದು ಆ ಭಾಗದ ಜನ ಸಾಮಾನ್ಯರಲ್ಲಿ ಭಯ ಭೀತಿ ಉಂಟಾಗಿದೆ.
ಈ ಬಗ್ಗೆ ಸ್ಥಳೀಯ ಗ್ರಾಮಪಂಚಾಯಿತಿ ಆಡಳಿತ ಆಗಲಿ ಅಥವಾ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ