ಸಿಂಗದೂರು ಹೊಸ ತೂಗು ಸೇತುವೆ ಹೆಸರಿಗೆ ಭಾರಿ ವಿರೋಧ..!
ಸಾಗರ : ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿರುವ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಸಂಪರ್ಕಿಸುವ 2.4 ಕಿಮೀ ಉದ್ದದ ತೂಗು ಸೇತುವೆ ಇದೇ 14 ನೇ ತಾರೀಖಿಗೆ ಉದ್ಘಾಟನೆ ಗೋಳ್ಳಲಿದ್ದು ಹೊಸ ಸೇತುವೆ ಹೆಸರಿನ ವಿಚಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
ಸೇತುವೆಗೆ ಸಿಗಂದೂರು ಹೆಸರು ಇಡುತ್ತಿರುವ ಬಗ್ಗೆ ಸ್ಥಳೀಯರ ಬಲವಾದ ವಿರೋಧ ವ್ಯಕ್ತವಾಗಿದ್ದು
ಯಾವುದೇ ಧರ್ಮಕ್ಕೆ ಸೇರಿದ ಹೆಸರನ್ನು ಇಡದಂತೆ ಒತ್ತಾಯ ಮಾಡಲಾಗಿದೆ. ಈ ಸೇತುವೆಗಾಗಿ ಹಲವರ ಹೋರಾಟವಿದೆ.
ಅವರನ್ನು ಗಣನೆಗೆ ತೆಗೆದುಕೊಳ್ಳದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.ಕೇವಲ ರಾಜಕೀಯ ಲಾಭಕ್ಕಾಗಿ ಈ ಹೆಸರು ಇಡಲಾಗುತ್ತಿದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಾಗರದ ಕಡೆಯಿಂದ ಕರೂರು ಭಾಗಕ್ಕೆ ಹೋಗುವುದಕ್ಕೆ ಸೇತುವೆ ನಿರ್ಮಾಣವಾಗಿದೆ. ಈ ಸೇತುವೆ ನಿರ್ಮಾಣದ ಹಿಂದೆ ಕರೂರು ಭಾಗದವರ ಸತತ ಪ್ರಯತ್ನ ಹೋರಾಟಗಳಿವೆ. ಸೇತುವೆಗೆ ಸ್ಥಳೀಯರು ಸೇರಿ ಯಾರೊಂದಿಗೂ ಚರ್ಚೆ ಮಾಡದೇ, ಸಲಹೆ ಪಡೆಯದೇ ಏಕಪಕ್ಷೀಯವಾಗಿ ಕೆಲವೇ ರಾಜಕಾರಣಿಗಳ ನಿರ್ಧಾರವಾಗಿದೆ. " ಸಿಗಂದೂರು ಶ್ರೀ ಕ್ಷೇತ್ರ ಚೌಡೇಶ್ವರಿ ಸೇತುವೆ' ಎಂಬ ಉದ್ದದ ಹೆಸರು ಇಡಲು ಯೋಜನಾ ಬದ್ಧವಾಗಿ ನಿರ್ಧರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸೇತುವೆಯ ನಿರ್ಮಾಣದಲ್ಲಿ ಈ ರಾಜಕಾರಣಿಗಳು ಪ್ರಯತ್ನಿಸಿ ತಮ ಕರ್ತವ್ಯ ಮಾಡಿದ್ದಾರೆ. ಸೇತುವೆ ದೇವಸ್ಥಾನಕ್ಕೆ ಸೇರಿದಲ್ಲ, ಅಷ್ಟೇ ಅಲ್ಲದೆ ಅದೊಂದು ಖಾಸಗಿ ದೇವಸ್ಥಾನವಾಗಿದೆ. ಹಾಗಾಗಿ ಶರಾವತಿ ತೂಗು ಸೇತುವೆ ಎಂದು ಹೆಸರು ಇಡುವಂತೆ ಮತ್ತು ರಾಜ್ಯ ಸರ್ಕಾರ ಈ ಸೇತುವೆಗೆ ಶರಾವತಿ ತೂಗು ಸೇತುವೆ ಎಂಬ ಹೆಸರು ಶಿಫಾರಸು ಮಾಡಬೇಕು ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಹಾಗೂ ಸಾಹಿತಿ ಅ.ರಾ ಶ್ರೀನಿವಾಸ ಒತ್ತಾಯಿಸಿದ್ದಾರೆ.