ಶಿವಮೊಗ್ಗದಲ್ಲಿ ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲು ಚರಂಡಿಗೆ ಬಿಸಾಡಿದ ಆರೋಪ - ಎಸ್ ಪಿ ಹೇಳಿದ್ದೇನು..!?
ಶಿವಮೊಗ್ಗ : ರಾಗಿಗುಡ್ಡದಲ್ಲಿ ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲು ಚರಂಡಿಗೆ ಬಿಸಾಡಿದ ಆರೋಪ ಮಾಡಲಾಗಿದೆ. ಅನ್ಯಕೋಮಿನ ಯುವಕರು ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಗೊಂದಲದ ವಾತವರಣ ನಿರ್ಮಾಣವಾಗಿದೆ. ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದಾರೆ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರ ವಾರ್ಡ್ ನ ಬಂಗಾರಪ್ಪ ಬಡಾವಣೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಶಿವಮೊಗ್ಗ ಸಬ್ ಡಿವಿಜನ್-2 ಡಿವೈಎಸ್ಪಿ ಸಂಜೀವ್ ಕುಮಾರ್ ಭೇಟಿ ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಐ ಸತ್ಯನಾರಾಯಣ, ಜಯನಗರ ಠಾಣೆ ಪಿಐ ಸಿದ್ದೇಗೌಡ ಭೇಟಿ ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್, ಪ್ರಾಥಮಿಕ ಹಂತದಲ್ಲಿ ವಿಗ್ರಹವನ್ನ ಕೆಳಗೆ ಬೀಳಿಸಲಾಗಿತ್ತು. ಈಗ ಅದನ್ನ ಮೊದಲು ಹೇಗಿತ್ತೋ ಹಾಗೆ ಇರಿಸಲಾಗಿದೆ. ಸಾರ್ವಜನಿಕರ ಬಳಿ ಇಬ್ಬರು ಬಂದು ಮಾತನಾಡಿದ ವಿಡಿಯೋವೊಂದಿದೆ. ಪರಿಶೀಲನೆ ನಡೆಸಿ ನಂತರ ಯಾರು ಅದನ್ನ ಮಾಡಿದ್ದಾರೆ. ಉದ್ದೇಶವೇನು ಎಂಬುದು ಬೆಳಕಿಗೆ ಬರಲಿದೆ ಎಂದರು.
Tags:
ಶಿವಮೊಗ್ಗ ಸುದ್ದಿ