ಆರ್ ಎಂ ಮಂಜುನಾಥ್ ಗೌಡರಿಗೆ ಜಾಮೀನು ಮಂಜೂರು RMM

ಆರ್ ಎಂ ಮಂಜುನಾಥ್ ಗೌಡರಿಗೆ ಜಾಮೀನು ಮಂಜೂರು

ತೀರ್ಥಹಳ್ಳಿ : ಡಿಸಿಸಿ ಬ್ಯಾಂಕ್ ಹಗರಣ ಸಂಬಂಧಪಟ್ಟಂತೆ
 ಇ. ಡಿ ಕಷ್ಟಡಿಯಲ್ಲಿದ್ದ ಕಾಂಗ್ರೆಸ್ ಮುಖಂಡರಾದ
ಆರ್ ಎಂ ಮಂಜುನಾಥ್ ಗೌಡರು ನ್ಯಾಯಾಲಯದಲ್ಲಿ
ಸಲ್ಲಿಸಿದ್ದ ಜಾಮೀನು ಅರ್ಜಿ ಕಡೆಗೂ ಪುರಸ್ಕೃತಗೊಂಡಿದೆ.

ಡಿಸಿಸಿ ಬ್ಯಾಂಕ್ ಹಗರಣ ವಿಚಾರದಲ್ಲಿ ಇ. ಡಿ ಕೈಲಿ ಸಿಕ್ಕಿ ಬಿದ್ದಿದ್ದ ಮಂಜುನಾಥ್ ಗೌಡರು ತಾವು ಸಲ್ಲಿಸಿದ್ದ ಒಟ್ಟು ಮೂರು ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕೃತ ಮಾಡಿತ್ತು. ಆದರೆ ಇಂದು ಕಡೆಗೂ ಜಾಮೀನು ಮಂಜೂರು ಮಾಡಲಾಗಿದೆ.

ಆರ್ ಎಂ ಎಂ ಬಂಧನಕ್ಕೊಳಗಾಗಿ ಎರಡುವರೇ ತಿಂಗಳಿಗೂ ಜಾಸ್ತಿ ಆಗಿತ್ತು. ಇ ಡಿ ಬಲೆಗೆ ಬಿದ್ದು ಸರಿ ಸುಮಾರು 83 ದಿನಗಳ ಕಾಲ ಆಗಿತ್ತು. ಹಾಗಾಗಿ ಜಾಮೀನು ಕೋರಿ ನ್ಯಾಯಾಲಯದ ಮೋರೆ ಹೋಗಿದ್ದ ಆರ್ ಎಂ ಎಂ ಗೆ  ಹೈಕೋರ್ಟ್  ಜಾಮೀನು ಮಂಜೂರು ಮಾಡಿದೆ.
Previous Post Next Post