ಈ ಬಾರಿಯೂ ತೀರ್ಥಹಳ್ಳಿ ಭೂ ಬ್ಯಾಂಕ್‌ ಜಿಲ್ಲೆಗೆ ಪ್ರಥಮ - ವಿಜಯದೇವ್ PLD Bank

ಈ ಬಾರಿಯೂ ತೀರ್ಥಹಳ್ಳಿ ಭೂ ಬ್ಯಾಂಕ್‌ ಜಿಲ್ಲೆಗೆ ಪ್ರಥಮ - ವಿಜಯದೇವ್

ತೀರ್ಥಹಳ್ಳಿ : ಇತ್ತೀಚಿನ ವರ್ಷಗಳಲ್ಲಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್‌ಗಳು ನಬಾರ್ಡ್‌ನ
ಆರ್ಥಿಕ ನೆರವು ಕಡಿಮೆಯಾಗಿರುವುದರಿಂದ ಸೊರಗಿ ಹೋಗಿದ್ದರೇ, ತೀರ್ಥಹಳ್ಳಿಯ ಭೂ ಬ್ಯಾಂಕ್
ಮಾತ್ರ ವ್ಯವಹಾರ, ಸಾಲ ವಿತರಣೆ, ಲಾಭಾಂಶ ಹಂಚಿಕೆ, ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು
ರೂಪಿಸುವಲ್ಲಿ ನಿರತವಾಗಿದೆ ಎಂದು ಅಧ್ಯಕ್ಷರಾದ ವಿಜಯದೇವ್ ಹೇಳಿದರು.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸುಮಾರು 85 ವರ್ಷಗಳ ಭವ್ಯ ಪರಂಪರೆ ಹಾಗೂ ಹೊಂದಿರುವ ತೀರ್ಥಹಳ್ಳಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್‌ ಅತ್ಯುತ್ತಮ ವ್ಯವಹಾರವನ್ನು ನಡೆಸಿ, ಈ ವರ್ಷವೂ ಸುಮಾರು 54 ಲಕ್ಷದ 73 ಸಾವಿರ ರೂಪಾಯಿ ಲಾಭಗಳಿಸಿ ಬ್ಯಾಂಕಿನ ಷೇರುದಾರರ ವಿಶ್ವಾಸವನ್ನು ಮತ್ತೊಮ್ಮೆ ದಾಖಲಿಸಿಕೊಂಡಿದೆ ಎಂದರು 

ಈ ವರ್ಷವೂ ಸಹ ಶೇಕಡ 10 ರ ಲಾಭಾಂಶವನ್ನು ಷೇರುದಾರ ಸದಸ್ಯರಿಗೆ ಹಂಚಿಕೆ ಮಾಡಲು ಬ್ಯಾಂಕ್
ಆಡಳಿತ ಮಂಡಳಿ ತೀರ್ಮಾನಿಸಿದೆ. ಸುಮಾರು 85 ವರ್ಷಕ್ಕೂ ಹಿಂದೆ ತೀರ್ಥಹಳ್ಳಿಯ ಅನೇಕ ಹಿರಿಯ ಸಹಕಾರಿಗಳ ನೆರವು, ಸಹಕಾರ ಹಾಗೂ ಪರಿಶ್ರಮದಿಂದ ಪ್ರಾರಂಭಗೊಂಡ ತೀರ್ಥಹಳ್ಳಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್ ತಾಲ್ಲೂಕಿನ ಬಹುತೇಕ ರೈತರಿಗೆ ಸಕಾಲದಲ್ಲಿ ಸಾಲವನ್ನು ನೀಡಿ ಕೃಷಿ
ಚಟುವಟಿಕೆಗಳಿಗೆ ಆರ್ಥಿಕ ಭದ್ರತೆ ನೀಡಿದೆ. ಹೊಸ ತೋಟ ನಿರ್ಮಿಸಲು, ಹಳೆಯ ತೋಟಗಳ ಅಭಿವೃದ್ಧಿ
ಬೇಲಿ ನಿರ್ಮಿಸಲು ಕೊಟ್ಟಿಗೆ ನಿರ್ಮಾಣಕ್ಕೆ ಸಾಲ ನೀಡಿ ಅಗತ್ಯದ ಹಣಕಾಸು ಒದಗಿಸುವಲ್ಲಿ ಮುಂಚೂಣಿಯಲ್ಲಿತ್ತು. ತಾಲ್ಲೂಕಿನ ರೈತ ಸಮುದಾಯ ಇಂದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ತೀರ್ಥಹಳ್ಳಿ ಭೂ ಬ್ಯಾಂಕ್ ಕೊಡುಗೆ ಬಹು ದೊಡ್ಡದಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯ ಕಳೆದ ಹಲವು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿರುವ ತೀರ್ಥಹಳ್ಳಿ ಬ್ಯಾಂಕ್, ರಾಜ್ಯ ಮಟ್ಟದಲ್ಲೂ ಅತ್ಯುತ್ತಮ ಬ್ಯಾಂಕುಗಳಲ್ಲಿ ಒಂದಾಗಿದ್ದು ನಬಾರ್ಡ್ ಪುರಸ್ಕೃತ ಪ್ರಾಥಮಿಕ, ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಎಂಬ ಹೆಗ್ಗಳಿಕೆಯನ್ನು ನಿರಂತರ ಉಳಿಸಿಕೊಂಡು ಬಂದಿದೆ.
ತೀರ್ಥಹಳ್ಳಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಮಾತ್ರ ಉತ್ತಮ ವ್ಯವಹಾರ, ಲಾಭ ಹಂಚಿಕೆ, ಸಾಲ ವಿತರಣೆ, ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ವಿಶೇಷ ಶ್ರಮ
ವಹಿಸಿದೆ ಎಂದರು.

ಪ್ರಕೃತಿ ವೈಪರೀತ್ಯ, ಅನಾವೃಷ್ಟಿ, ಕೊಳೆರೋಗ ಮತ್ತು ಎಲೆಚುಕ್ಕಿ ರೋಗದಂತಹ ಸಮಸ್ಯೆಯಿಂದ ಆರ್ಥಿಕ ಅಸಮತೋಲನಗಳ ನಡುವೆಯೂ ಸಾಲ ಪಡೆದ ರೈತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್‌ ರಾಜ್ಯದ ಕೆಲವೇ ಲಾಭ ಗಳಿಸಿರುವ ಬ್ಯಾಂಕ್‌ಗಳಲ್ಲಿ ಒಂದಾಗಿ ಗಮನ ಸೆಳೆದಿದೆ. ಒಟ್ಟು 5392 ಮಂದಿ ಷೇರುದಾರರಿರುವ ಈ ಬ್ಯಾಂಕ್ ವಿವಿಧ ಯೋಜನೆಗಳಿಂದ ಬಹುಪಾಲು ಷೇರುದಾರರಿಗೆ ದೀರ್ಘಾವದಿ ಮತ್ತು ಮದ್ಯಮಾವಧಿ ಸಾಲ ನೀಡುತ್ತಾ ಬಂದಿದೆ. ಕಳೆದ 9 ವರ್ಷಗಳಿಂದ ಆಡಿಟ್ ತಪಾಸಣೆಯಲ್ಲಿ “ಎ” ಗ್ರೇಡ್ ಪಡೆದಿರುವ ತೀರ್ಥಹಳ್ಳಿ ಭೂ ಬ್ಯಾಂಕ್ ಕಳೆದ ಆರ್ಥಿಕ ವರ್ಷದ ಅಂದರೆ 31-03-2025 ರ ಮಾರ್ಚ್ ತಿಂಗಳ ಅಂತ್ಯಕ್ಕೆ ಮೊದಲ ಬಾರಿಗೆ ಲೆಕ್ಕ ಪತ್ರ ಕಡ್ಡಾಯವಾಗಿ ಅಂತ್ಯಗೊಂಡಿದ್ದು, ಶೇ. 84.57 ವಸೂಲಾತಿ ಮಾಡಿ ಸುಮಾರು 46 ಕೋಟಿ 28 ಲಕ್ಷದ ಆರ್ಥಿಕ
ವ್ಯವಹಾರ ನಡೆಸಿದೆ ಎಂದರು.

ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕಿನ ಸರ್ವಸದಸ್ಯರ ಮಹಾಸಭೆ ನಡೆಯಲಿದ್ದು, ಸದಸ್ಯರು ಸಕಾಲದಲ್ಲಿ ಆಗಮಿಸುವಂತೆಯೂ ಅಧ್ಯಕ್ಷರು ವಿನಂತಿಸಿದ್ದಾರೆ. ಈ ವರ್ಷವೂ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವ ಕಾರ್ಯಕ್ರಮ ನಡೆಸುತ್ತಿದ್ದು, ಶೈಕ್ಷಣಿಕ ಕ್ಷೇತ್ರದಲ್ಲೂ ಬ್ಯಾಂಕ್ ತನ್ನ ಸಹಕಾರ ಹಸ್ತ ಚಾಚುವ ಪ್ರಯತ್ನ ಮುಂದುವರೆಸಿದೆ. ಮಾಜಿ ಅಧ್ಯಕ್ಷರು ಹಾಗೂ ರಾಜ್ಯದ ಬ್ಯಾಂಕಿನ ಮಾಜಿ
ಅಧ್ಯಕ್ಷರಾಗಿದ್ದ ದಿ|| ಬಿ.ಎಸ್. ವಿಶ್ವನಾಥರವರು ಯಾವತ್ತು ತೀರ್ಥಹಳ್ಳಿ ಭೂ ಬ್ಯಾಂಕಿಗೆ ನೀಡಿದ ನೆರವನ್ನು ಮರೆಯಲಾಗುವುದಿಲ್ಲ. ಬ್ಯಾಂಕಿನ ಆಡಳಿತ ಮಂಡಳಿಯ ಉಪಧ್ಯಕ್ಷರಾದ  ಹಿರೇಗೋಡು ಶ್ರೀಧರಮೂರ್ತಿ, ವ್ಯವಸ್ಥಾಪಕರಾದ ಸಂಜಯ್ ಬ್ಯಾಂಕಿನ ನಿರ್ದೇಶಕರು, ನೌಕರ ಬಳಗ ಮುಖ್ಯವಾಗಿ ಷೇರುದಾರರ ನಿರಂತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ಪತಿಷ್ಠಿತ ಸ್ಥಾನ ಪಡೆದಿದ್ದು, ಸಹಕರಿಸಿದ ಎಲ್ಲರಿಗೂ ವಿಜಯ್ ದೇವ್ ಕೃತಜ್ಞತೆ
ಸಲ್ಲಿಸಿದ್ದಾರೆ.

ಚೀಟಿ ನಿಧಿ - ಗ್ಯಾಸ್ - ಪೆಟ್ರೋಲ್ ಬಂಕ್ ಮುಂದಿನ ಅವಧಿಗೆ ಹೊಸ ಸೇರ್ಪಡೆ

ಕೇವಲ ಸಾಲ ವಿತರಣೆ, ವಸೂಲಾತಿ, ಲಾಭಾಂಶ ಹಂಚಿಕೆಗಷ್ಟೆ ಬ್ಯಾಂಕನ್ನು ಸೀಮಿತಗೊಳಿಸದೆ ಲಾಭಾದಾಯಕವಾದ ಉಧ್ಯಮವನ್ನು ಮುಂದಿನ ದಿನಗಳಲ್ಲಿ ಆರಂಭಿಸಲು ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಈಗಾಗಲೆ ಚೀಟಿ ನಿಧಿ, ಪೆಟ್ರೋಲ್ ಬಂಕ್ ಪ್ರಾರಂಭ ಯಶಸ್ಸಿನ ಹೆಜ್ಜೆ ಇರಿಸಿದ್ದು ಭೂ ಬ್ಯಾಂಕನ್ನು ಆರ್ಥಿಕವಾಗಿ ಮೇಲೆತ್ತಲು ಈ ಯೋಜನೆ ರೂಪಿಸಿದ್ದಾರೆ ಚೀಟಿನಿಧಿ, ಪೆಟ್ರೋಲ್ ಬಂಕ್ ಗ್ಯಾಸ್ ಏಜೆನ್ಸಿ ಹಾಗೂ ಇತರ ಉದ್ಯಮಗಳನ್ನು ಭೂ ಬ್ಯಾಂಕಿನ ಆಶ್ರಯದಡಿ ತೆರೆಯುವ ಯೋಜನೆಯನ್ನು ಬಸವಾನಿ ವಿಜಯದೇವ್ ರೂಪಿಸಿದ್ದಾರೆ.





Previous Post Next Post