ಗುರುವೆoದರೆ ಬರಿಯ ವ್ಯಕ್ತಿಯಲ್ಲ, ಅದ್ಬುತ ಶಕ್ತಿ.
ಹಿoದೂ ಕ್ಯಾಲೆಂಡರ್ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯ ದಿನದoದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ.ಬೌದ್ದ ಧರ್ಮದ ಪ್ರಕಾರ ಗೌತಮ ಬುದ್ಧನು ತನ್ನ ಮೊದಲ ಐದು ಶಿಷ್ಯರಿಗೆ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ದಿನ.ಅಂದಿನಿಂದ ಗುರು ಪರoಪರೆ ಪ್ರಾರoಭವಾಯಿತೆoದು ಹೇಳಬಹುದು.
ಗುರು ಪೂರ್ಣಿಮೆ ಮಹಾಭಾರತ ವೇದ ಪುರಾಣಗಳ ರಚಿಸಿದ ಮಹರ್ಷಿ ವೇದ ವ್ಯಾಸ ರ ಜನ್ಮದಿನ ವೆoದು ಹೇಳಲಾಗುತ್ತದೆ. ವ್ಯಾಸ ಪೂರ್ಣಿಮೆ ಎoತಲೂ ಕರೆಯಲಾಗುವುದು."ಮಹಾಗುರು" ಎಂದು ಪರಿಗಣಿಸಲ್ಪಟ್ಟ ವೇದವ್ಯಾಸರ ಆಶೀರ್ವಾದ ವನ್ನು ಪಡೆಯಲು ಗುರು ಪೂರ್ಣಿಮೆಯ ದಿನವು ಶುಭ ಶ್ರೇಷ್ಠ ದಿನವೆoದು ಭಾವಿಸಲಾಗಿದೆ. ಕೆಲವರು ಗುರುಗಳ ಪಾದ ಪೂಜೆಯನ್ನು ಮಾಡಿ.ಹೂಗಳನ್ನು ಅರ್ಪಿಸಿ.ಭಜನೆ ಭಕ್ತಿಗೀತೆಗಳನ್ನು ಹಾಡಿ ಗುರುವಿಗೆ ಉಡುಗೊರೆಗಳನ್ನು ನೀಡಿ ಗೌರವಿಸುತ್ತಾರೆ.ನಮ್ಮ ಭಾರತ ದೇಶದ ಗುರು ಶಿಷ್ಯರ ಪರoಪರೆ ಶ್ರೇಷ್ಠವಾದದ್ದು.
ಗುರುವಿನ ಗುಲಾಮ ನಾಗುವ ತನಕ ದೊರೆಯದಣ್ಣಾ ಮುಕುತಿ ಎಂದು ನಮ್ಮ ಪುರoದರದಾಸ ಶ್ರೇಷ್ಠ ರು ಹೇಳಿರುವುದು ಸಾರ್ವಕಾಲಿಕವೂ ಸ್ಮರಿಸುವoತದ್ದು.ಗುರುವೆoದರೆ ಅಂಧಕಾರವನ್ನು ಹೋಗಲಾಡಿಸುವವರು.ಜ್ಞಾನ ಜ್ಯೋತಿಯನ್ನು ಬೆಳಗುವವರು.ನಾವು ಒಂದಲ್ಲಾ ಒಂದು ಗುರಿ ಇಟ್ಟುಕೊಂಡು ಸಾಧಿಸಲು ಹೊರಟಾಗ ಮುಂದೆ ಗುರಿ ಇರಬೇಕು.ಹಿಂದೆ ಗುರು ಇರಬೇಕು.ಆಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ.
ಹಿಂದಿನ ಗುರು ಶಿಷ್ಯ ಪರoಪರೆಯನ್ನು ನೋಡಿದಾಗ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿಯುವ ಗುರು ಶಿಷ್ಯರ ಹೆಸರನ್ನು ಪಟ್ಟಿ ಮಾಡಬಹುದು.ಹಿಂದೆ ಗುರುಕುಲದಲ್ಲಿ ಗುರುವಿಗೆ ಸಕಲ ಸೇವೆಗೈಯ್ಯುವ ಮೂಲಕ ಹಲವು ಸoಕಷ್ಟಗಳನ್ನು ಎದುರಿಸಿ ವಿದ್ಯೆಯನ್ನು ಗಳಿಸುವ ಕಾಲವಿತ್ತು.ಇಂದು ಹಣ ಕಟ್ಟಿದರೆ ಸಾಕು ವಿದ್ಯೆ ಸಿಗುತ್ತದೆ ಎನ್ನುವ ಕಾಲ ಘಟ್ಟಕ್ಕೆ ಬಂದು ತಲುಪಿದ್ದೇವೆ.ಗುರುವಿಲ್ಲದೇ ವಿದ್ಯಾಭ್ಯಾಸ ಸಾಧ್ಯವೇ ಇಲ್ಲ ಎನ್ನುವ ಹಂತ ದಿoದ..ಇಂದು ಗೂಗಲ್ ಇಂಟರ್ನೆಟ್ ಕೃತಕ ಬುದ್ದಿಮತ್ತೆ (Al) ಮೂಲಕ ಜ್ಞಾನ ಪಡೆದುಕೊಳ್ಳಲು ಸಾಧ್ಯ.ಗುರುವಿನ ಅಗತ್ಯವಿಲ್ಲ ಎನ್ನುವ ಕಾಲಘಟ್ಟಕ್ಕೆ ತಲುಪಿದ್ದೇವೆ.
ಬಹುಬೇಗ ಸಿಗುವ ಜ್ಞಾನಾರ್ಜನೆಯಿoದ ಮಕ್ಕಳಲ್ಲಿ ಅವಿಧೇಯತೆ ಅಲ್ಪಕಾಲದ ಬುದ್ದಿಮತ್ತೆ ಉಂಟಾಗುತ್ತಿದೆ.
ಗುರು ಬ್ರಹ್ಮ ಗುರು ವಿಷ್ಣು
ಗುರುದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗುರುವೇ ನಮಃ
ಎಂದು ಪ್ರಾರ್ಥಿಸುತ್ತಿದ್ದ ಶಿಷ್ಯ ಪರoಪರೆಯು ಮುಂದೊoದು ದಿನ ಗುರುವೇನ್ ಮಹಾ ಎನ್ನುವ ಕಾಲ ಬಹಳ ದೂರವಿಲ್ಲ.ನಮ್ಮ ಇಂದಿನ ಯುವ ಪೀಳಿಗೆಯನ್ನು ಸಾಮಾಜಿಕ ಜಾಲ ತಾಣಗಳು ಬಹುಬೇಗ ಹಾಳುಗೆಡುವ ಹಾದಿ ತೋರಿಸುತ್ತಿವೆ.ಆದ ಕಾರಣ ನಾವು ಪೋಷಕರು ಗುರುಗಳು ನಮ್ಮ ವಿದ್ಯಾರ್ಥಿ ಗಳನ್ನು ಶತಾಯಗತಾಯ ಉತ್ತಮ ದಾರಿಯಲ್ಲೆ ಮುನ್ನಡೆಸುವ ಸರ್ವಪ್ರಯತ್ನ ಮಾಡಲೇಬೇಕು.
ಈ ದೇಶದ ಭವಿಷ್ಯ ಶಾಲಾ ಕೊಠಡಿಯ ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ.ಈ ನಿಟ್ಟಿನಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವುದು ಪೋಷಕರು ಗುರುಗಳು ಈ ಸಮಾಜದ ಆದ್ಯ ಕರ್ತವ್ಯವಾಗಿದೆ.ನಮಗೆ ಸರಿ ದಾರಿ ತೋರಿದ ಪ್ರತಿಯೊಬ್ಬರೂ ಗುರು ಸಮಾನರೇ ಆಗಿರುವರು.ಎಲ್ಲಾ ಗುರುವರ್ಯರನ್ನು ಸ್ಮರಿಸುತ್ತಾ...ಗುರುವೆoದರೆ ಬರಿಯ ವ್ಯಕ್ತಿಯಲ್ಲ..ಅದ್ಬುತ ಶಕ್ತಿ. ಆ ಅದ್ಬುತ ಶಕ್ತಿಯ ಕೃಪೆ ಪಡೆದು ನಾವು ಧನ್ಯರಾಗೋಣ.ಶತ ಶತಮಾನಗಳಿoದ ಬೆಳೆದು ಬoದ ಗುರು ಪರoಪರೆಯನ್ನು ಉಳಿಸೋಣ.ಗೌರವಿಸೋಣ.
ಸರ್ವ ಗುರು ಸಮಾನರಿಗೆ ಗುರುಪೂರ್ಣಿಮೆಯ ಶುಭಾಶಯಗಳು.
ಬರಹ : ಅನಿತಸೂರ್ಯ
ಶಿಕ್ಷಕಿ . ತೀರ್ಥಹಳ್ಳಿ
Tags:
ಗುರು ಪೂರ್ಣಿಮೆ