ರಾಷ್ಟ್ರೀಯ ಮಟ್ಟದ ಸಮ್ಮೇಳನಕ್ಕೆ ತೀರ್ಥಹಳ್ಳಿ ಪ.ಪಂ. ಅಧ್ಯಕ್ಷ ಅಸಾದಿ ಆಯ್ಕೆ..! Muncipal President

ರಾಷ್ಟ್ರೀಯ ಮಟ್ಟದ ಸಮ್ಮೇಳನಕ್ಕೆ ತೀರ್ಥಹಳ್ಳಿ ಪ.ಪಂ. ಅಧ್ಯಕ್ಷ ಅಸಾದಿ ಆಯ್ಕೆ..!
ತೀರ್ಥಹಳ್ಳಿ : ಜುಲೈ 3 ಮತ್ತು 4 ರಂದು ಎರಡು ದಿನಗಳ  ಚುನಾಯಿತ ಮೇಯರ್‌ಗಳು/ಅಧ್ಯಕ್ಷರ ಉಪ ನಿಯೋಜಿತ ಸಮ್ಮೆಳನವನ್ನು ಹರಿಯಾಣದ ಗುರುಗ್ರಾಮದಲ್ಲಿ ಆಯೋಜಿಸಲಾಗಿದ್ದು . ಈ  ರಾಷ್ಟ್ರೀಯ ಮಟ್ಟದ ಸಮ್ಮೇಳನದ‌ ಮುಖ್ಯ ವಿಷಯವಾದ ಸಾಂವಿಧಾನಿಕ ಪ್ರಜಾಪ್ರಭುತ್ವ ಮತ್ತು ರಾಷ್ಟ್ರ ನಿರ್ಮಾಣವನ್ನು ಬಲಪಡಿಸುವಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪಾತ್ರ ಬಗ್ಗೆ ಚರ್ಚೆ ಹಮ್ಮಿಕೊಳ್ಳಲಾಗಿದೆ. 

ಸಮ್ಮೆಳವನ್ನುದ್ದೇಶಿಸಿ ಈಗಾಗಲೇ ಲೋಕಸಭೆಯ ಪ್ರಧಾನ ಕಾರ್ಯದರ್ಶಿಯವರ ಕಛೇರಿಯಿಂದ ಆಹ್ವಾನಪತ್ರ ಹೊರಡಿಸಿದ್ದು  ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ದೇಶದ ಎಲ್ಲಾ  ನಗರಗಳಲ್ಲಿನ ಮೇಯರ್ ಮತ್ತು ಅಧ್ಯಕ್ಷ ಹುದ್ದೆಗಳನ್ನು ಅಲಂಕರಿಸಿರುವ ಚುನಾಯಿತ ಪ್ರತಿನಿಧಿಗಳು ಮುಖ್ಯವಾಗಿ ಭಾಗವಹಿಸಲಿದ್ದಾರೆ. ಈ ಸಮ್ಮೆಳಕ್ಕೆ ತೀರ್ಥಹಳ್ಳಿ ತಾಲೂಕನ್ನು ಪ್ರತಿನಿಧಿಸುವ ಅವಕಾಶ ಪ.ಪಂ ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿಯವರಿಗೆ ಸಿಕ್ಕಿದ್ದು ಆಯ್ಕೆಯಾಗಿರುವ ವಿಚಾರ ಕೇಳಿ ಅವರ ಅಭಿಮಾನಿ ಬಳಗ ಸಂತಸ ವ್ಯಕ್ತಪಡಿಸಿದ್ದಾರೆ.

ಪೌರಾಡಳಿತ ನಿರ್ದೇಶನಾಲಯದ ಸಹಾಯಕ ನಿರ್ದೇಶಕ (ಅಭಿವೃದ್ಧಿ)  ಅಮಿತ್ ತರದಲೆ ಅವರನ್ನು ಲೋಕಸಭಾ ಸಚಿವಾಲಯದೊಂದಿಗೆ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ.
 
Previous Post Next Post