ಇಂದಿನಿಂದ ಮೊಬೈಲ್ ಬಳಸುವುದಿಲ್ಲ - ನೋಡುವುದಿಲ್ಲ - ಹೊನ್ನೆತಾಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಪ್ರತಿಜ್ಞೆ
ತೀರ್ಥಹಳ್ಳಿ : ತಾಲ್ಲೂಕಿನ ಹೊನ್ನೇತಾಳು ಗ್ರಾಮ ಪಂಚಾಯತಿಯ ಹೊನ್ನೆತಾಳು ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಇಂದಿನಿಂದ ಮೊಬೈಲ್ ಬಳಸುವುದಿಲ್ಲ - ಮೊಬೈಲ್ ನೋಡುವುದಿಲ್ಲ ಎಂಬುದಾಗಿ ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರ ಮುಂದೆ ಪ್ರತಿಜ್ಞೆ ಮಾಡಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಶಿಲ್ಪ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಾದ ನಿತ್ಯಾನಂದರವರು ಮೊಬೈಲ್ ಬಳಸುವುದರಿಂದಾಗುವ ದುಷ್ಪರಿಣಾಮಗಳು ಹಾಗೂ ಮಕ್ಕಳ ಭವಿಷ್ಯಕ್ಕೆ ಆಗಲಿ ಅಥವಾ ಅವರ ಆರೋಗ್ಯದ ಮೇಲಾಗಲಿ ಯಾವ ರೀತಿಯಲ್ಲಿ ಮೊಬೈಲ್‌ನಿಂದ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದರಿಂದ ಈ ಶಾಲೆಯ ವಿದ್ಯಾರ್ಥಿಗಳು ಇಂದಿನಿಂದ
ನಾವೆಲ್ಲರೂ ಪ್ರಮಾಣ ಮಾಡುತ್ತೇವೆ ಎಂದು ಇನ್ನು ಮುಂದೆ
ಮೊಬೈಲ್ ಬಳಸುವುದಿಲ್ಲ ಹಾಗೆಯೇ ಮನೆಯಲ್ಲಿ ಪೋಷಕರ ಬಳಿ ಮೊಬೈಲ್ ಕೇಳುವುದಿಲ್ಲ ಎಂಬುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷರಾದ ನಿತ್ಯಾನಂದರವರು ಮಾತನಾಡುತ್ತಾ ಮಕ್ಕಳು ಮೊಬೈಲ್ ಬಳಕೆಯನ್ನು ನಿಲ್ಲಿಸುವ ಅಭಿಯಾನ ಕೇವಲ ನಮ್ಮ ಶಾಲೆಗೆ ಸೀಮಿತವಾಗಿರದೆ ಇಡೀ ರಾಜ್ಯದಲ್ಲಿ ಇದೊಂದು ಅಭಿಯಾನವಾಗಬೇಕು ಎಂದರು.
Tags:
ತೀರ್ಥಹಳ್ಳಿ ಸುದ್ದಿ