ಅಧಿಕಾರಿಗಳಿಗೆ ಬೈಯದೆ ಮುತ್ತು ಕೊಡೋಕೆ ಆಗುತ್ತಾ? ಆರಗ ಪ್ರೆಶ್ನೆ!?
ತೀರ್ಥಹಳ್ಳಿ : ಭ್ರಷ್ಟ ಅಧಿಕಾರಿಗಳನ್ನ, ಜನರ ಜೀವ ತಿನ್ನುವಂತವರನ್ನ ಬೈದರೆ ಬೇಜಾರು ಮಾಡಿಕೊಳ್ಳುವ ರಾಜಕಾರಣಿಗಳು ಇದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಆರಗ ಬೈಯುತ್ತಾರೆ ಎಂದು ಹೇಳುತ್ತಾರೆ, ಹಾಗಾದರೆ ಅಧಿಕಾರಿಗಳನ್ನು ಬೈಯದೆ ಮುತ್ತು ಕೊಡಲು ಆಗುತ್ತಾ? ಎಂದು ಶಾಸಕ ಆರಗ ಜ್ಞಾನೇಂದ್ರ ಪ್ರೆಶ್ನೆ ಮಾಡಿದರು.
ಇದನ್ನು ಓದಿ - ಆರಗ ಜ್ಞಾನೇಂದ್ರ ಅಧಿಕಾರಿಗಳ ಜೊತೆಗೆ ಏಕವಚನದಲ್ಲಿ ವಿವೇಚನೆ ಇಲ್ಲದೆ ಮಾತನಾಡುತ್ತಾರೆ - ಕಿಮ್ಮನೆ ರತ್ನಾಕರ್
ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ನಾನು ರಾಜಕಾರಣ ಮಾಡಲ್ಲ. ನಾನು ಈಗಲೂ ಬೈಯುತ್ತೇನೆ ಮುಂದೆಯೂ ಬೈಯುತ್ತೇನೆ, ಸರ್ಕಾರಿ ನೌಕರರ ಮೇಲೆ ಕೈ ಮಾಡಿದರೆ ಕೈ ಮಾಡಿದ ಎಂದಾಗುತ್ತೆ ಆದರೆ ಅವರು ಮಾಡಿದ ಅನಾಚಾರಕ್ಕೆ ಹೊಡೆಯುವುದಲ್ಲ ಬೇರೆಯದರಲ್ಲೇ ಹೊಡಿಯಬೇಕು ಎಂದೇನಿಸುತ್ತೆ, ಅಷ್ಟರ ಮಟ್ಟಿಗೆ ಕ್ರೋಧ ಬರುತ್ತದೆ ಆದರೆ ಬೈದರೆ ಬೇಸರ ಮಾಡಿಕೊಳ್ಳುವವರು ಇದ್ದಾರೆ ಎಂದು ಕಿಮ್ಮನೆ ರತ್ನಾಕರ್ ಗೆ ಟಾಂಗ್ ಕೊಟ್ಟರು.
ಈಗಿನ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ಹಾಗಾಗಿ ರಾಜ್ಯದಲ್ಲಿ ಕೆಲಸ ಮಾಡುವ ನೌಕರರಿಗೆ ಫ್ರೀ ಆಗಿದೆ. ನಾವೇನೇ ಮಾಡಿದರು ನಡೆಯುತ್ತದೆ ಎಂದು ಕೊಂಡಿದ್ದಾರೆ.
ಬೇರೆ ತಾಲೂಕು ಕಚೇರಿ ಹಾಳಾಗಿ ಹೋಗಿದ್ದಾವೆ, ಈಗ ನಮ್ಮ ತೀರ್ಥಹಳ್ಳಿಯಲ್ಲೂ ಈ ಪರಿಸ್ಥಿತಿ ಬರುವುದು ಸರಿಯಲ್ಲ
ತಾಲೂಕು ಕಛೇರಿ ಎದುರು ದೊಡ್ಡ ಹೋರಾಟ ಶೀಘ್ರದಲ್ಲಿ ಮಾಡುತ್ತೇವೆ ಎಂದರು.
Tags:
ಆರಗ ಜ್ಞಾನೇಂದ್ರ