ನಾನು ಅಡ್ಜಸ್ಟ್ಮೆಂಟ್ ರಾಜಕೀಯ ಮಾಡಲ್ಲ - ಕಿಮ್ಮನೆ ರತ್ನಾಕರ್
ನನ್ನ ಹಾಗೂ ಆರಗ ಜ್ಞಾನೇಂದ್ರರ ಬಗ್ಗೆ ಇ ಡಿ ತನಿಖೆ ನಡೆಸಲಿ - ಕಿಮ್ಮನೆ ಓಪನ್ ಚಾಲೆಂಜ್
ತೀರ್ಥಹಳ್ಳಿ : 1983 ರಿಂದ ನಾನು ಹಾಗೂ ಆರಗ ಜ್ಞಾನೇಂದ್ರ ಇಲ್ಲಿಯವರೆಗೆ ಎಲ್ಲಾ ಚುನಾವಣೆ ಸ್ಪರ್ಧೆ ಮಾಡಿದ್ದೇವೆ. ಹಾಗಾಗಿ ನಮ್ಮಿಬ್ಬರನ್ನು ಬೇಕಾದರೆ ಇ ಡಿ ತನಿಖೆ ನಡೆಸಲಿ, ಯಾರದ್ದು ಹಣ ಜಾಸ್ತಿ ಇದೆ ಎಂದು ತಿಳಿಯುತ್ತದೆ ಎಂದು ಕಿಮ್ಮನೆ ರತ್ನಾಕರ್ ಓಪನ್ ಚಾಲೆಂಜ್ ಹಾಕಿದರು.
ಇದನ್ನು ಓದಿ - ಆರಗ ಜ್ಞಾನೇಂದ್ರ ಅಧಿಕಾರಿಗಳ ಜೊತೆಗೆ ಏಕವಚನದಲ್ಲಿ ವಿವೇಚನೆ ಇಲ್ಲದೆ ಮಾತನಾಡುತ್ತಾರೆ - ಕಿಮ್ಮನೆ ರತ್ನಾಕರ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಅವರ ರೀತಿ ಅಡ್ಜಸ್ಟ್ಮೆಂಟ್ ರಾಜಕೀಯ ಮಾಡಲು ನನಗೆ ಬರುವುದಿಲ್ಲ. ತೀರ್ಥಹಳ್ಳಿಯಲ್ಲಿ ಇಲ್ಲಿಯವರೆಗೆ ನಾನು ಮತ್ತು ಆರಗ ಜ್ಞಾನೇಂದ್ರ ಸುಮಾರು ಚುನಾವಣೆಗಳಲ್ಲಿ ಒಟ್ಟಿಗೆ ಸ್ಪರ್ಧೆ ಮಾಡಿದ್ದೇವೆ. ನನ್ನ ಚುನಾವಣೆಗೆ ನಿಜವಾಗಿಯೂ ಹೇಳುತ್ತೇನೆ ಬ್ರಾಹ್ಮಣ ಸಮುದಾಯದವರೇ ಹಣ ನೀಡಿದ್ದರು. ಈಗಲೂ ನನಗೆ ಅವರೇ ಸಹಕಾರ ನೀಡುತ್ತಿದ್ದಾರೆ. ನನ್ನ ಮತ್ತು ಆರಗ ಜ್ಞಾನೇಂದ್ರರ ಆಸ್ತಿ ಎಷ್ಟಿದೆ ಎಂದು ತನಿಖೆ ನಡೆಸಲಿ, ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಒಟ್ಟಿನಲ್ಲಿ ಇಲ್ಲಿಯವರೆಗೆ ಗುಮ್ಮಿ ನೀರು ಕುಡಿದೆ ಎಂದು ಹೇಳುವ ಆರಗ ಜ್ಞಾನೇಂದ್ರ ಎಂದು ಟಿಕೀಸುತ್ತಿದ್ದ ಕಿಮ್ಮನೆ ರತ್ನಾಕರ್ ಇಂದು ಆಸ್ತಿ ವಿಷಯವಾಗಿ ಇ ಡಿ ತನಿಖೆ ನಡೆಸುವ ಬಗ್ಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಇಬ್ಬರಿಗೂ ಇ ಡಿ ತನಿಖೆ ನಡೆಯುತ್ತಾ? ಕಾದು ನೋಡಬೇಕಿದೆ