ಅತೀ ವೇಗವಾಗಿ ಬಂದು ಆಟೋ ಗೆ ಡಿಕ್ಕಿ ಹೊಡೆದ ಕ್ಯಾರಿ ವಾಹನ !! Tth

ಅತೀ ವೇಗವಾಗಿ ಬಂದು ಆಟೋ ಗೆ ಡಿಕ್ಕಿ ಹೊಡೆದ ಕ್ಯಾರಿ ವಾಹನ !!
ತೀರ್ಥಹಳ್ಳಿ : ನಿಂತಿದ್ದ ಆಟೋವೊಂದಕ್ಕೆ ಸುಜುಕಿ ಕ್ಯಾರಿ ಶಾಮಿಯಾನ ವಾಹನವೊಂದು ಅತೀ ವೇಗವಾಗಿ ಬಂದು ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದ ಘಟನೆ ಮೇಲಿನಕುರುವಳ್ಳಿಯಲ್ಲಿ ನಡೆದಿದೆ.

ಶುಕ್ರವಾರ ಸಂಜೆ ಮೇಲಿನಕುರುವಳ್ಳಿಯ ರೇಷ್ಮೆ ಫಾರಂ ರಸ್ತೆಯ ಎದುರು ಭಾಗದಲ್ಲಿ ಈ ಅಪಘಾತ ಸಂಭವಿಸಿದೆ.
ಕಟ್ಟೆಹಕ್ಲು ಭಾಗದ ಶಾಮಿಯಾನ ಹಾಕುವ ಗಾಡಿ ಅತ್ಯಂತ ವೇಗವಾಗಿ ಬಂದಿದೆ. ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಆಟೋವೊಂದಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ. ಆಟೋ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಅದೃಷ್ಟವಶಾತ್ ಆಟೋದಲ್ಲಿ ಯಾರು ಇರಲಿಲ್ಲ.

ಇನ್ನು ಸುಜುಕಿ ಕ್ಯಾರಿ ಶಾಮಿಯಾನ ವಾಹನದ ಮುಂಭಾಗ
ಜಖಂಗೊಂಡಿದ್ದು ಚಾಲಕನಿಗೆ ಯಾವುದೇ ತೊಂದರೆ ಆಗಿಲ್ಲ ಎನ್ನಲಾಗಿದೆ. ಓವರ್ ಟೇಕ್ ಮಾಡಲು ಹೋಗಿದ್ದೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.



Previous Post Next Post