ಆಟೋ ಬಾಡಿಗೆ ವಿಚಾರದಲ್ಲಿ ಗಲಾಟೆ - ಹಲ್ಲೆ ಮಾಡಿದ್ದ ಇಬ್ಬರು ಜೈಲಿಗೆ..!
ತೀರ್ಥಹಳ್ಳಿ: ಆಟೋ ಬಾಡಿಗೆ ವಿಚಾರದಲ್ಲಿ ಓರ್ವನ ಮೇಲೆ ಏಕಾಏಕಿ ಹಲ್ಲೆ ನಡೆಸಿದ ಘಟನೆ ತೀರ್ಥಹಳ್ಳಿ ಪಟ್ಟಣದ ಆಗುಂಬೆ ಸ್ಟಾಂಡ್ ಬಳಿ ಗುರುವಾರ ಸಂಜೆ ನಡೆದಿದ್ದು, ಹಲ್ಲೆ ನಡೆಸಿದ ಇಬ್ಬರನ್ನು ತೀರ್ಥಹಳ್ಳಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
ಪ್ರಕಾಶ್ ಎಂಬುವರ ಮೇಲೆ ಕೃಷ್ಣಮೂರ್ತಿ (53 ವರ್ಷ), ಮೊಹಮದ್ ಇಸಾಕ್ (40 ವರ್ಷ ) ಎಂಬುವವರು ಹಲ್ಲೆ ಮಾಡಿದ್ದಾರೆ. ಪ್ರಕಾಶ್ ಎಂಬಾತ ಆಗುಂಬೆ ಸ್ಟಾಂಡ್ ಬಳಿ ಬೇರೆ ಆಟೋ ಹತ್ತುವಾಗ ಈ ಇಬ್ಬರು ಅವಾಚ್ಯ ಶಬ್ದದಿಂದ ನಿಂಧಿಸಿದ್ದಾರೆ. ಯಾಕೆ ಹಾಗೆ ಮಾತನಾಡುತ್ತೀರಾ ಎಂದು ಪ್ರಕಾಶ್ ಕೇಳಿದ್ದಕ್ಕೆ ಏಕಾಏಕಿ ಗಾಜಿನ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಿನ್ನನ್ನು ಸಾಯಿಸದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಕಾಶ್ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ಅವರಿಬ್ಬರನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags:
ಕ್ರೈಂ ಸುದ್ದಿ