ಕುಡುಮಲ್ಲಿಗೆ ಬಳಿ ಅಪಘಾತ - ಇಬ್ಬರಿಗೆ ಗಂಭೀರ ಗಾಯ..!
ತೀರ್ಥಹಳ್ಳಿ : ಬೈಕ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದ್ದು ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಕುಡುಮಲ್ಲಿಗೆ ಬಳಿ ನಡೆದಿದೆ.
ಪತ್ರಕರ್ತ ತುಪ್ಪದಮನೆ ಶಿವಣ್ಣ ಹಾಗೂ ತೀರ್ಥಹಳ್ಳಿ ಬಿಜೆಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಿರುದ್ ಕೆಳಕೆರೆ ಬೆಜ್ಜವಳ್ಳಿಗೆ ಹೋಗುವ ಸಂದರ್ಭದಲ್ಲಿ ಕುಡುಮಲ್ಲಿಗೆ ಸಮೀಪ ಎದುರಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರಿಗೂ ಗಾಯವಾಗಿದೆ.
ಇಬ್ಬರನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
Tags:
ಅಪಘಾತ ಸುದ್ದಿ