ತೀರ್ಥಹಳ್ಳಿಯಲ್ಲಿ ಮುಖ್ಯ ರಸ್ತೆಯಲ್ಲಿರುವ ಮರಕ್ಕೆ ಆಸಿಡ್ ಹಾಕಿದ ಪ್ರಕರಣ - ಡಿಸಿ ಖಡಕ್ ಎಚ್ಚರಿಕೆ! DC

ತೀರ್ಥಹಳ್ಳಿಯಲ್ಲಿ ಮುಖ್ಯ ರಸ್ತೆಯಲ್ಲಿರುವ ಮರಕ್ಕೆ ಆಸಿಡ್ ಹಾಕಿದ ಪ್ರಕರಣ - ಡಿಸಿ ಖಡಕ್ ಎಚ್ಚರಿಕೆ!

ತೀರ್ಥಹಳ್ಳಿ : ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಡಿವೈಡರ್ ಮಧ್ಯದಲ್ಲಿರುವ ಅಲಂಕೃತ ಮರದ ಬುಡಕ್ಕೆ ತಡ ರಾತ್ರಿ ಕೆಲವು ದುಷ್ಕರ್ಮಿಗಳು ಬಂದು  ಆಸಿಡ್ ಹಾಕಿದ್ದು ಶಿವಮೊಗ್ಗ ಸುದ್ದಿಯಲ್ಲಿ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾದ ದೃಶ್ಯವನ್ನು ಬಿತ್ತರ ಮಾಡಲಾಗಿತ್ತು.

ಸುದ್ದಿ ತಿಳಿದ ತಕ್ಷಣವೇ ದಕ್ಷ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿ ಆಸಿಡ್ ಹಾಕಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.

ಪಟ್ಟಣ ಪಂಚಾಯತ್ ಆಡಳಿತದ ವತಿಯಿಂದ ಈಗಾಗಲೇ ಮರದ ಬುಡಕ್ಕೆ ಹಾಕಿದ ಆಸಿಡ್ ತೆರವಗೊಳಿಸುತ್ತಿದೆ. ಸ್ಥಳದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಆಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಸುಶೀಲ ಶೆಟ್ಟಿ, ಆರೋಗ್ಯ ಅಧಿಕಾರಿ ಜಯಪ್ರಕಾಶ್ ಸೇರಿ ಹಲವರು ಇದ್ದರು.




Previous Post Next Post