ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ತೀರ್ಥಹಳ್ಳಿ ತಹಸೀಲ್ದಾರ್ ಗೆ ಶುಭ ಹಾರೈಕೆ - ಕಾರಣವೇನು..? Tth

 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ತೀರ್ಥಹಳ್ಳಿ ತಹಸೀಲ್ದಾರ್ ಗೆ ಶುಭ ಹಾರೈಕೆ - ಕಾರಣವೇನು..?



ತೀರ್ಥಹಳ್ಳಿ : ಸರ್ಕಾರಿ ಅಧಿಕಾರಿಗಳು ಎಂದರೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ಇರುವುದೇ ಹೆಚ್ಚು, ಯಾರೊಂದಿಗೂ ಬೆರೆಯದೆ ತಮ್ಮ ಪಾಡಿಗೆ ತಾವು ಎಂಬಂತೆ ಇರುವ ಮಂದಿಯ ಮಧ್ಯೆ ತಮ್ಮ ಜನ್ಮದಿನವನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಆಚರಿಸಿದ ವಿಶೇಷ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.



ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ಹಾಗೆಯೇ ತಮ್ಮ ಕೆಲಸದಲ್ಲಿ ಅತ್ಯಂತ ನಿಷ್ಠಾವಂತ ಅಧಿಕಾರಿಯಾಗಿರುವ ತಾಲೂಕಿನ ದಂಡಾಧಿಕಾರಿ ರಂಜಿತ್ ಕೆ ಎಸ್ ತಮ್ಮ ಜನ್ಮದಿನವನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಜೊತೆಗೆ ಆಚರಿಸಿದ್ದಾರೆ.

ಆಗುಂಬೆ ಸಮೀಪದ ಹೊನ್ನೇತಾಳು ಶಾಲೆಯ ಆರಂಭದ ದಿನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಹೋಗಿದ್ದ ತಹಸೀಲ್ದಾರ್ ನಂತರ ಅಲ್ಲಿ ತಮ್ಮ ಜನ್ಮದಿನದ ಪ್ರಯುಕ್ತ ಮಕ್ಕಳಿಗೆ ಸಿಹಿ ನೀಡಲು ಹಣ ನೀಡಿ ಬಂದಿದ್ದರು. ಮಂಗಳವಾರ ತಮ್ಮ ಜನ್ಮದಿನವನ್ನು ಆಚರಿಸಿಕೊಂಡ ತಹಸೀಲ್ದಾರ್ ಗೆ ಹೊನ್ನೇತಾಳು ವಿದ್ಯಾರ್ಥಿಗಳು ಶುಭ ಹಾರೈಸಿದರು. ಅಷ್ಟೇ ಅಲ್ಲದೆ ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದಲ್ಲಿ ಒಂದು ದಿನದ ಅನ್ನಸಂತರ್ಪಣೆ ಮಾಡಿಸಿ ಎಲ್ಲರ ಮನ ಗೆದ್ದರು.

ಜನರ ಜೊತೆಗೆ ಇದ್ದು ಕೆಲಸ ಮಾಡುವ ಅಧಿಕಾರಿಗಳು ಸಿಗುವುದು ಬಾರಿ ಅಪರೂಪ. ಅಂತಹದರಲ್ಲಿ ತಮ್ಮ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡ ತಹಸೀಲ್ದಾರ್ ಗೆ ತಾಲೂಕಿಗೆ ಒಳ್ಳೊಳ್ಳೆ ಕೆಲಸ ಮಾಡಲಿ ಹಾಗೆಯೇ ನಿಮಗೆ ಆಯುಷ್ಯ ಆರೋಗ್ಯ ನೀಡಿ ಆ ದೇವರು ಕಾಪಾಡಲಿ ಎಂದು ಹೊನ್ನೇತಾಳು ಶಾಲೆಯ ವಿದ್ಯಾರ್ಥಿಗಳು ಹಾಗೂ ತೀರ್ಥಹಳ್ಳಿ ತಾಲೂಕಿನ ಜನತೆ ಶುಭ ಹಾರೈಸಿದ್ದಾರೆ.









Previous Post Next Post