ಮಾನಸಿಕ ಆರೋಗ್ಯ ಸೇವೆಗಳ ಆಚರಣೆ ಕಾರ್ಯಕ್ರಮ- ಯೋಗ ಆಧಾರಿತ ವಿಸ್ತರಣಾ ಸೇವೆಗಳಿಗೆ ಚಾಲನೆ
ತೀರ್ಥಹಳ್ಳಿ : ಮಾನಸಿಕ ಹಿನ್ನಲೆಯುಳ್ಳ ವ್ಯಕ್ತಿಗಳಿಗೆ ನೀಡುವ ಸೇವೆಯಲ್ಲಿ ವಿಸ್ತರಣೆ ಮಾಡುವ ಸಲುವಾಗಿ ಯೋಗ- ಆಧಾರಿತ ವಿಸ್ತರಣೆ ಮಾಡಲು ಐಸಿಎಂಆರ್ ತೀರ್ಮಾನಿಸಿದ್ದು ಅದನ್ನು ಚಾಲನೆ ನೀಡುವ ಸಲುವಾಗಿ ತೀರ್ಥಹಳ್ಳಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.
ಆರಗ ಜ್ಞಾನೇಂದ್ರ ಮಾತನಾಡಿ ಅತ್ಯಂತ ಸಂತೋಷದ ಹಾಗೂ ಸಂಭ್ರಮದ ದಿನ. ಮಾನಸಿಕ ರೋಗಿಗಳನ್ನು ತಪಾಸಣೆ ಹಾಗೂ ಚಿಕಿತ್ಸೆ ನೀಡಲು ಎರಡು ತಾಲೂಕು ಗುರುತಿಸಲು ಹೇಳಲಾಗಿದೆ ಎಂದಾಗ ನಾನೇ ತೀರ್ಥಹಳ್ಳಿ ಯನ್ನು ಆಯ್ಕೆ ಮಾಡಲು ಹೇಳಿದ್ದೆ. ಯಾಕೆ ಎಂಬ ವೈದ್ಯರ ಪ್ರೆಶ್ನೆಗೆ ನಮ್ಮದು ಬುದ್ದಿವಂತರ ತಾಲೂಕು ನಿಜ ಆದರೆ ಇಲ್ಲಿಯೇ ಮಾನಸಿಕ ವ್ಯವಸ್ಥೆ ಜಾಸ್ತಿ ಇದೆ. ವರ್ಷಕ್ಕೆ ಎಷ್ಟೊಂದು ಆತ್ಮಹತ್ಯೆ ಆಗುತ್ತಿದೆ ಎಂದು ಪೊಲೀಸ್ ಇಲಾಖೆಯಿಂದ ತರಿಸಿ ಇಲ್ಲ ಸರ್ವೇ ಮಾಡಿಸಿ ಎಂದು ಕೇಳಿಕೊಂಡಿದ್ದೆ. ಮನೆಯಲ್ಲಿ ಮಾನಸಿಕ ವ್ಯಕ್ತಿ ಇದ್ದರು ಯಾರು ಹೇಳಿಕೊಳ್ಳುತ್ತಿಲ್ಲ. ಬೇರೆ ರೋಗಕ್ಕೆ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆ ಇದೆ. ಆದರೆ ಮಾನಸಿಕ ರೋಗಕ್ಕೆ ಇಲ್ಲಿ ಯಾವ ವ್ಯವಸ್ಥೆ ಇಲ್ಲ. ಅಂತಹ ಮಾನಸಿಕ ರೋಗ ಸರಿಪಡಿಸಲು ಯೋಗ ಅಳವಡಿಕೆ ಮಾಡಿರುವುದು ಬಹಳ ಸಂತಸವಾಗಿದೆ. ಈಗ ಇಡೀ ದೇಶವೇ ಈಗ ಯೋಗವನ್ನು ಮಾಡಲು ನಿಂತಿದೆ ಅದಕ್ಕಾಗಿ ಯೋಗಕ್ಕಾಗಿ ದಿನವನ್ನೇ ಇಡಲಾಗಿದೆ. ಮಾನಸಿಕ ರೋಗಿಗಳ ಸಂಖ್ಯೆ ಕಡಿಮೆ ಆಗಲಿ, ಎಲ್ಲರೂ ಸಂತೋಷದಿಂದ ಬದುಕಿ ಬಾಳಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ಮಾನಸಿಕ ವೈದ್ಯರಾದ
ಸುರೇಶ್ ಮಾತನಾಡಿ ತಾಲೂಕಿನಲ್ಲಿ 485 ಜನರನ್ನು ಪತ್ತೆ ಹಚ್ಚಿದ್ದೀವಿ. ಯಾರ ಹೆಸರು, ಊರು ಹೇಳಲು ಇಷ್ಟಪಡುವುದಿಲ್ಲ. ಮಾನಸಿಕ ಅಸ್ವಸ್ಥರಾಗಿದ್ದ ಒಬ್ಬರನ್ನು ಚಿಕಿತ್ಸೆ ನೀಡಿ ಅವರನ್ನು ಸಂಪೂರ್ಣ ಗುಣಮುಖರಾಗಿ ಮಾಡಿದ್ದೇವೆ. ಕಾಡಿನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯನ್ನು ಸಂಪೂರ್ಣ ಬದಲಾವಣೆ ಮಾಡಿ ಮನೆಗೆ ಬರುವಂತೆ ಮಾಡಿದ್ದೇವೆ. ಸಾಮಾನ್ಯ ವ್ಯಕ್ತಿಯಾಗಿ ಈಗ ಜನರೊಡನೆ ಬದುಕುತ್ತಿದ್ದಾರೆ. ಅದೇ ರೀತಿ ಇನ್ನೊಂದು ಪ್ರಕರಣದಲ್ಲಿ ಇಪ್ಪತ್ತು ವರ್ಷದಿಂದ ಯಾವುದೇ ಊಟ ಮಾಡದೇ ಹಸಿ ಮಾಂಸ ಹಾಗೂ ಹಸಿ ಮೀನು ತಿನ್ನುತ್ತಿದ್ದ ವ್ಯಕ್ತಿ ರಸ್ತೆಯಲ್ಲಿ ಕತ್ತಿ ಹಿಡಿದು ಓಡಾಡುತ್ತಿದ್ದರು. ಅಂತಹ ವ್ಯಕ್ತಿಯನ್ನು ಚಿಕಿತ್ಸೆ ನೀಡಿ ಈಗ ಗುಣಮುಖರಾಗಿ ಮಾಡಿದ್ದೇವೆ ಎಂದರು
ಇನ್ನು ಚಿಕಿತ್ಸೆ ಪಡೆದವರ ಪುತ್ರರೊಬ್ಬರು ಮಾತನಾಡಿ
ನಾನು ಶಾಲೆಗೆ ಹೋಗುವಾಗ ನಮ್ಮ ತಂದೆಗೆ ಮಾನಸಿಕ ತೊಂದರೆ ಉಂಟಾಯಿತು. ಶಾಲೆಗೆ ನಮ್ಮನ್ನು ನೋಡಲು ಬರುತ್ತಿದ್ದರು. ಆದರೆ ಅರ್ಧಮ್ ಬರ್ಧ ಬಟ್ಟೆ ಹಾಕಿಕೊಂಡು ಬರುತ್ತಿದ್ದರು. ಆ ನಂತರ ಹಳ್ಳಿ ಯಲ್ಲಿ ಸಾಮಾನ್ಯವಾಗಿ ದೈವದ ಕಾಟ ಎನ್ನುತ್ತಾರೆ ಹಾಗೆ ಎಂದುಕೊಂಡೆವು. ಆದರೆ ಆರೋಗ್ಯದ ಮೇಲೆ ಸಮಸ್ಯೆ ಬೀರಿದ್ದು ಗೊತ್ತಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದೆವು. ಈಗ ನಮ್ಮ ತಂದೆ ಆರಾಮಾಗಿದ್ದಾರೆ. ಆದರೆ ಸ್ವಲ್ಪ ಹುಷಾರಾದಾಗ ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟಿದ್ದರು ಆಗ ಪುನಃ ಆರೋಗ್ಯದಲ್ಲಿ ಸಮಸ್ಯೆ ಆಗಿತ್ತು. ಇಲ್ಲಿನ ವೈದ್ಯರು ಹಾಗೂ ಮೆಗ್ಗಾನ್ ಆಸ್ಪತ್ರೆ ವೈದ್ಯರ ಸಲಹೆ ಯಿಂದ ಈಗ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.