ತೀರ್ಥಹಳ್ಳಿಯಲ್ಲಿ ಲಾಯರ್ ಮೇಲೆ ಹಲ್ಲೆ - ವಕೀಲರಿಂದ ದೂರು ಸಲ್ಲಿಕೆ
ತೀರ್ಥಹಳ್ಳಿ : 06.06.2025 ರ ಶುಕ್ರವಾರ ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ನಮ್ಮ ಸಂಘದ ಗೌರವಾನ್ವಿತ ಸದಸ್ಯರಾದ ಮಧುಕರ್ ಮಯ್ಯ ರವರು ನ್ಯಾಯಾಲಯದ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ತಮ್ಮ ಕಛೇರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಘಟನೆಯನ್ನು ನಮ್ಮ ಸಂಘವು ತೀವ್ರವಾಗಿ ಖಂಡಿಸಿರುತ್ತದೆ.
ಈ ರೀತಿ ಹಲ್ಲೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಿ
ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಹಲ್ಲೆಗೊಳಗಾದ ವಕೀಲರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ತೀರ್ಥಹಳ್ಳಿ ನ್ಯಾಯವಾದಿಗಳ ಸಂಘದಿಂದ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರಂಜಿತ್ ಕೆ ಎಸ್ ರವರಿಗೆ ಮನವಿ ಸಲ್ಲಿಸಿದರು.
ಇನ್ನು ಶಿವಮೊಗ್ಗ, ಹೊಸನಗರ, ಸೊರಬ ಸೇರಿ ಹಲವು ತಾಲೂಕಿನಲ್ಲಿ ವಕೀಲ ಮಧುಕರ್ ಮಯ್ಯ ಪರವಾಗಿ ನ್ಯಾಯಾಲಯದ ಕಾರ್ಯ ಕಲಾಪಗಳಿಂದ ಹೊರಗುಳಿದು ವಕೀಲರ ಸಂಘವು ಈ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಇಂತಹ ಘಟನೆಗಳು ಮರುಕಳಿಸಬಾರದು ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.
Tags:
ತೀರ್ಥಹಳ್ಳಿ ಸುದ್ದಿ