ಹನ್ನೊಂದು ಕುಟುಂಬ ಕಣ್ಣೀರಿಗೆ ಸಿದ್ದರಾಮಯ್ಯನವರೇ ಕಾರಣ - ಆರಗ ಜ್ಞಾನೇಂದ್ರ Araga jnanendra

ಹನ್ನೊಂದು ಕುಟುಂಬ ಕಣ್ಣೀರಿಗೆ ಸಿದ್ದರಾಮಯ್ಯನವರೇ ಕಾರಣ - ಆರಗ ಜ್ಞಾನೇಂದ್ರ



ತೀರ್ಥಹಳ್ಳಿ : ಸಿದ್ದರಾಮಯ್ಯನವರ ಹೇಳಿಕೆ ನೋಡಿದರೆ ಅವರೆಷ್ಟು ಭಂಡ ಬಿದ್ದಿದ್ದಾರೆ ಎಂದು ತಿಳಿಯುತ್ತದೆ. ಬೇರೆ ಯಾರೇ ಮುಖ್ಯಮಂತ್ರಿ ಆಗಿದ್ದರೂ ರಾಜೀನಾಮೆ ಕೊಟ್ಟು ಹೋಗುತ್ತಿದ್ದರು. ಅವರ ತಪ್ಪಿನಿಂದಲೇ ಆಗಿದ್ದು ಎಂದು  ಸಾಮಾನ್ಯ ಜನರಿಗೂ ಗೊತ್ತಾಗುತ್ತದೆ ಇಂದು ಹನ್ನೊಂದು ಕುಟುಂಬ ಕಣ್ಣೀರಿಗೆ ಸಿದ್ದರಾಮಯ್ಯನವರೇ ಕಾರಣ ಎಂದು ಶಾಸಕ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.

ಮಂಗಳವಾರ ಪಟ್ಟಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ತಮ್ಮ ಪ್ರತಿಷ್ಠೆಗಾಗಿ ಹಾಗೂ ರಾಜಕೀಯ ಲಾಭಕ್ಕಾಗಿ ಮಾಡಿರುವ ಸ್ಪರ್ಧೆ, ಪೋಲೀಸರ ಬಳಿ ಮಾತನಾಡದೇ, ಬಂದೋಬಸ್ತ್ ಬಳಿ ತಲೆ ಕೆಡಿಸಿಕೊಳ್ಳದೆ, ಅವ್ಯವಸ್ಥೆಯಿಂದ ಅಷ್ಟೊಂದು ಜನ ತೀರಿಕೊಂಡಿದ್ದಾರೆ. ಪೊಲೀಸರು ಬೇಡ ಎಂದರು ಕಾರ್ಯಕ್ರಮ ಮಾಡಿದ್ದಾರೆ. ಎರಡು ದಿನ ಮುಂದೆ ಹಾಕಬಹುದಿತ್ತು. ತರಾತುರಿಯಲ್ಲಿ ಮಾಡಿದ್ದು ಇವರೇ ಹಾಗಾಗಿ ಇವರೇ ಅಪರಾಧಿಗಳು ಹಾಗಾಗಿ ರಾಜೀನಾಮೆ ಕೊಟ್ಟು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದರು.

ಇನ್ನು ಸುಹಾಸ್ ಹತ್ಯೆ ವಿಚಾರವಾಗಿ ಮಾತನಾಡಿ ಕೇಂದ್ರ ಎನ್ಐಎ ತನಿಖೆಗೆ ಕೊಟ್ಟಿದ್ದು ಒಳ್ಳೆಯ ವಿಚಾರ,  ಸುಹಾಸ್ ಹತ್ಯೆಯ ಹಿಂದಿರುವ ಅನೇಕ ವ್ಯಕ್ತಿಗಳು ವಿದೇಶಿತ ಸಹಾಯ ಪಡೆದವರು, ಪಿಎಫ್ಐ ಸಂಘಟನೆ ಸೇರಿ ನಿಷೇಧಿತ ಸಂಘಟನೆಯಲ್ಲಿ ತೊಡಗಿಸಿಕೊಂಡವರು, ಇದ್ದಾರೆ. ಇದು ಬಹಳ ಅಪಾಯಕಾರಿ ಪರಿಸ್ಥಿತಿ, ಹಾಗಾಗಿ ಎನ್ಐಎ ತನಿಖೆ ಮಾಡುವುದು ಅವಶ್ಯಕತೆ ಇದೆ ಎಂದರು.




Previous Post Next Post