ಆರಿದ್ರಾ ಮಳೆ ಅಬ್ಬರಕ್ಕೆ ಮನೆ ಮೇಲೆ ಬಿದ್ದ ಬಾರಿ ಗಾತ್ರದ ಮರ..! Rain Efect

ಆರಿದ್ರಾ ಮಳೆ ಅಬ್ಬರಕ್ಕೆ ಮನೆ ಮೇಲೆ ಬಿದ್ದ ಬಾರಿ ಗಾತ್ರದ ಮರ..!

ತೀರ್ಥಹಳ್ಳಿ : ಆರಿದ್ರಾ ಮಳೆಯ ಅಬ್ಬರ ಹೆಚ್ಚಾಗಿದ್ದು ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ಬಾರಿ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದ ಘಟನೆ ತಾಲೂಕಿನ ಹೊನ್ನೇತಾಳುವಿನಲ್ಲಿ ನಡೆದಿದೆ.

ಹೊನ್ನೇ ತಾಳು ಗ್ರಾಮಪಂಚಾಯತ್ ಚಂಗಾರು ಗ್ರಾಮದ ನೇತ್ರಾವತಿ ಮತ್ತು ಬಾಬು ಪೂಜಾರಿ ಎನ್ನುವರ ಮನೆ ಮೇಲೆ ತಡ ರಾತ್ರಿ 3 ಗಂಟೆಯ ಹೊತ್ತಿಗೆ ಮನೆಯಲ್ಲಿ ಎಲ್ಲರೂ ಮಲಗಿದ ಹೊತ್ತಿನಲ್ಲಿ ಮರವು ಮುರಿದು ಬಿದ್ದಿದೆ. ಸದ್ಯಕ್ಕೆ
ಯಾವುದೇ ಪ್ರಾಣ ಹಾನಿಯಾಗಿಲ್ಲ. ಮನೆ ಹಾಗೂ ಅಡಿಕೆ ಮರಗಳು ತೀವ್ರವಾಗಿ ಹಾನಿಯಾಗಿದೆ..

ಮನೆಯಲ್ಲಿದ್ದ ಹಲವು ವಸ್ತುಗಳು ಜಕ್ಕಮ್ ಗೊಂಡಿದ್ದು 20ಕ್ಕೂ ಹೆಚ್ಚು ಅಡಿಕೆ ಮರ ಹಾನಿಯಾಗಿದೆ. ಸಂಬಂಧಪಟ್ಟ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನಾಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನಯ್ ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯರಾದ ಚಂಗಾರು ಗ್ರಾಮ ಗ್ರಾಮದ ಪಂಚಾಯತ್ ಸದಸ್ಯರಾದ ರವೀಶ್ ಹೊಸಪೇಟೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.




Previous Post Next Post