ತೀರ್ಥಹಳ್ಳಿಯಲ್ಲಿ ಇನ್ನು ಸಿಸಿಟಿವಿ ಕಣ್ಗಾವಲು..!? CCTV

ತೀರ್ಥಹಳ್ಳಿಯಲ್ಲಿ ಇನ್ನು ಸಿಸಿಟಿವಿ ಕಣ್ಗಾವಲು..!?

ಭದ್ರತೆ ಹಿತೈದೃಷ್ಟಿ ಹಾಗೂ ವಾಹನದ ಮೇಲೆ ಹದ್ದಿನಕಣ್ಣು..!
ತೀರ್ಥಹಳ್ಳಿ : ಈಗಾಗಲೇ ರಾಜ್ಯಾದ್ಯಂತ ವಾಹನಗಳ ಮೇಲೆ ಹದ್ದಿನಕಣ್ಣು ಇಡುವ ಸಲುವಾಗಿ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತಿದ್ದು ಶಿವಮೊಗ್ಗದಲ್ಲೂ ಅಳವಡಿಕೆ ಮಾಡಲಾಗಿದೆ. ಇನ್ನು ಸದ್ಯದಲ್ಲೇ ತೀರ್ಥಹಳ್ಳಿಗೂ ಸಿಸಿಟಿವಿ ಕಣ್ಗಾವಲು ಅಳವಡಿಕೆ ಬಗ್ಗೆ ಚಿಂತನೆ ನಡೆದಿದ್ದು ಅದಕ್ಕೆ ಶಿಫಾರಸ್ಸು ಕೂಡ ಆಗಿದೆ ಎಂದು ತಿಳಿದು ಬಂದಿದೆ.

ತೀರ್ಥಹಳ್ಳಿಯಲ್ಲಿ ಸಿಸಿಟಿವಿ ಅಳವಡಿಕೆ ಬಹಳ ಮುಖ್ಯವಾಗಿದ್ದು ಒಂದು ಪಟ್ಟಣದಲ್ಲಿ ಏನೇ ಸಮಸ್ಯೆ ಅಥವಾ ಅವಘಡವಾದರೂ ಭದ್ರತೆ ಹಿತೈದೃಷ್ಟಿಯಿಂದ ಹಾಗೂ ಪೊಲೀಸ್ ಇಲಾಖೆ ವಾಹನ ಅಡ್ಡಗಟ್ಟುತ್ತಾರೆ ಎಂದು ಪೊಲೀಸರನ್ನೇ ಸಾರ್ವಜನಿಕರು ಬೈಯುವುದು ಕೂಡ ಈ ಸಿಸಿಟಿವಿ ಅಳವಡಿಕೆ ಮಾಡಿದರೆ ಅನುಕೂಲ ಕೂಡ ಆಗುತ್ತದೆ. ಇದರ ಬಗ್ಗೆ ಪಟ್ಟಣ ಪಂಚಾಯತ್ ಆದಷ್ಟು ಬೇಗ ಸರ್ಕಾರದ ಅನುದಾನದಲ್ಲಿ ಪಟ್ಟಣದಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕಿದೆ.

ಪಟ್ಟಣದಲ್ಲಿ ಒಟ್ಟು ಎಂಟರಿಂದ ಹತ್ತು ಸಿಸಿಟಿವಿ ಅಗತ್ಯವಿದೆ. ಹಾಗೂ ಪೊಲೀಸರು ಅದನ್ನು ವೀಕ್ಷಣೆ ಮಾಡಲು ಒಂದು ಡಿವಿಆರ್ ಸಹ ಬೇಕಿದ್ದು ಅಂದಾಜು 8 ಲಕ್ಷ ಹಣ ಬೇಕು. ಇದನ್ನು ಪಟ್ಟಣ ಪಂಚಾಯತ್ ಸರ್ಕಾರದ ಅನುದಾನದಲ್ಲಿ ಆಗಲಿ ಅಥವಾ ಯಾರಾದರೂ ದಾನಿಗಳ ಸಹಕಾರದಿಂದ 
ಆದಷ್ಟು ಬೇಗ ಸಿಸಿಟಿವಿ ಅಳವಡಿಕೆ ಮಾಡಿದರೆ ಪಟ್ಟಣದಲ್ಲಿ ಹದ್ದಿನಕಣ್ಣು ಇಡಬಹುದಾಗಿದೆ.
Previous Post Next Post