ನರೇಂದ್ರ ಮೋದಿಯವರ ಫೋಟೋ ಇದೆ ಎಂಬ ಕಾರಣಕ್ಕೆ ಜನೌಷಧಿ ಕೇಂದ್ರವನ್ನು ಕಾಂಗ್ರೆಸ್ ಸರ್ಕಾರ ಮುಚ್ಚಲು ಹೊರಟಿದೆ - ನವೀನ್ ಹೆದ್ದೂರು
ತೀರ್ಥಹಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಕಳೆದ ಬಿಜೆಪಿ ಸರ್ಕಾರ ಮಾಡಿದ್ದ ಯೋಜನೆಗಳನ್ನು ಮಣ್ಣುಪಾಲು ಮಾಡಿದೆ. ತಾವು ಮಾಡಿರುವ ಐದು ಯೋಜನೆಗಳು ಎಲ್ಲೆಡೆ ಇರಬೇಕೆಂಬ ಕಾರಣದಿಂದ ಹಳೆಯ ಎಲ್ಲಾ ಯೋಜನೆಗಳನ್ನು ರದ್ದು ಮಾಡಿದ್ದಾರೆ. ಅದರಲ್ಲೂ ಕೇಂದ್ರದ ಯೋಜನೆಯಾದ ಜನೌಷಧಿ ಕೇಂದ್ರ ಮುಚ್ಚಲು ಹೊರಟಿರುವುದು ಸರಿಯಲ್ಲ ಎಂದು ತಾಲೂಕು ಬಿಜೆಪಿ ಅಧ್ಯಕ್ಷರಾದ ನವೀನ್ ಹೆದ್ದೂರು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ತಾಲೂಕು ಆಸ್ಪತ್ರೆಯ ಎದುರು ತಾಲೂಕು ಬಿಜೆಪಿ ವತಿಯಿಂದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರ ಮುಚ್ಚಲು ಹೊರಟಿರುವ ಕಾರಣಕ್ಕೆ ಪ್ರತಿಭಟನೆ ನಡೆಸಲಾಯಿತು.
ಎಷ್ಟೋ ಬಡ ಜನರಿಗೆ ಅನುಕೂಲ ಮಾಡುವ ಸಲುವಾಗಿ
ಕೇಂದ್ರ ಸರ್ಕಾರ ಅತ್ಯಂತ ಕಡಿಮೆ ಹಣದಲ್ಲಿ ಔಷಧಗಳನ್ನು ನೀಡುತ್ತಿತ್ತು. ಆದರೆ ಅದರಲ್ಲಿ ನರೇಂದ್ರ ಮೋದಿಯವರ ಫೋಟೋ ಇದೆ ಎಂಬ ಕಾರಣಕ್ಕೆ ಜನೌಷಧಿ ಕೇಂದ್ರವನ್ನು ಕಾಂಗ್ರೆಸ್ ಸರ್ಕಾರ ಮುಚ್ಚಲು ಹೊರಟಿದೆ. ತಮ್ಮ ಸರ್ಕಾರ ಬಂದ ನಂತರ ಪಂಚ ಗ್ಯಾರೆಂಟಿ ಯೋಜನೆ ಮಾಡಿತ್ತು.
ಬಡವರ ಕಷ್ಟ ನೀಗುವ ಸಲುವಾಗಿ ಗ್ಯಾರೆಂಟಿ ಯೋಜನೆ ಮಾಡಿದ್ದಾರೆ ಎಂದು ನಾವು ಭಾವಿಸಿದ್ದೆವು. ಆದರೆ ಈಗ ಐದು ಯೋಜನೆಗಳು ಯಾವ ಹಂತಕ್ಕೆ ತಲುಪಿದೆ ಎಂದು ಕರ್ನಾಟಕ ಜನರು ನೋಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಎಂದರು ನಾಲ್ಕು ತಿಂಗಳಿಂದ ಹಣ ಇಲ್ಲ. ಕೇಳಿದರೆ ಮುಖ್ಯಮಂತ್ರಿಗಳು ಹೇಳುತ್ತಾರೆ ನಾವು ಪ್ರತಿ ತಿಂಗಳು ಹಾಕುತ್ತೀವಿ ಎಂದು ಹೇಳಿರಲಿಲ್ಲ,. ಜನಪರ ಯೋಜನೆ ಎಂದ ಮೇಲೆ ಅದನ್ನು ಜನರಿಗೆ ತಲುಪಿಸಿ ಎಂದು ಹಿಂದೆ ಬಿದ್ದಿದ್ದೇವೆ ಹೊರತು ರಾಜಕಾರಣ ಇಲ್ಲ ಎಂದರು.
ಮನುಷ್ಯನಿಗೆ ಆರೋಗ್ಯ, ಶಿಕ್ಷಣ, ಆಹಾರ ಈ ಮೂರು ಬಹಳ ಮುಖ್ಯ. ಆದರೆ ಈಗ ಈ ಮೂರು ಸಹ ವ್ಯವಹಾರ ಆಗಿದೆ. ಮೆಡಿಕಲ್ ನಲ್ಲಿ ಲಾಭಿ ಮಾಡದಿದ್ದರು ಅದರ ಹಿಂದೆ ಉತ್ಪಾದಿಸುವ ಕಂಪನಿಗಳು ಲಾಭಿ ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿಯೇ ಬಡವರಿಗೆ ಅನುಕೂಲ ಆಗಲಿ ಎಂದು ಮೋದಿಯವರು ಜನೌಷಧಿ ಕೇಂದ್ರ ಮಾಡಿದ್ದರು.
ಅದರಲ್ಲಿ ಅತ್ಯಂತ ಕಡಿಮೆ ಹಣದಲ್ಲಿ ಔಷದಿ ದೊರಕುತ್ತಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯಕ್ಕಾಗಿ ಅದನ್ನು ಬಂದ್ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಆರ್ ಸಿ ಬಿ ವಿಜಯೋತ್ಸವ ದಲ್ಲಿ ನಡೆದ ದುರಂತ ಘಟನೆ ಬಗ್ಗೆ ಮಾತನಾಡಿ ಸರ್ಕಾರ ಚಿಂತನೆ, ದೂರದೃಷ್ಟಿ ಇಲ್ಲದೆ ವಿಜಯೋತ್ಸವ ಆಚರಿಸಲು ನಿರ್ಧಾರ ಮಾಡಿದ್ದು ಈ ದುರಂತಕ್ಕೆ ಕಾರಣವಾಗಿದೆ. ವಿಜಯೋತ್ಸವ ಮಾಡಬೇಡಿ ಎಂದು ಯಾರು ಹೇಳಿಲ್ಲ ಆದರೆ ಅದಕ್ಕೆ ಏನೆಲ್ಲಾ ಸೌಲಭ್ಯ ಬೇಕು, ಎಷ್ಟು ಮಂದಿ ಪೊಲೀಸ್ ಬೇಕು, ಎಂಬುದು ನೋಡದೆ ನೀವೇ ವಿಜಯೋತ್ಸವ ದಲ್ಲಿ ಕಪ್ ಹಿಡಿದು ಪೋಸ್ ಕೊಡಲು ಹೋದರೆ ನಿಮ್ಮ ಸಂತೋಷಕ್ಕೆ ಸಾಮಾನ್ಯರ ಜೀವ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಂಭಮೇಳ ದಲ್ಲಿ ಕಾಲ್ತುಳಿತ ಆಗಿದ್ದಕ್ಕೆ ಮಾತನಾಡಿದ್ದ ನೀವು ಈಗ ಯಾರ ಮೇಲೋ ತಪ್ಪನ್ನು ಹೊರೆಸುತ್ತಿದ್ದೀರಾ? 50 ಸಾವಿರ ಜನ ಇದ್ದ ಕಾರ್ಯಕ್ರಮ ವನ್ನು ರೂಪಿಸುವ ಯೋಗ್ಯತೆ ಇಲ್ಲ ಅಂತಹದರಲ್ಲಿ 60 ಕೋಟಿ ಜನರು ಭಾಗಿಯಾದ್ದ ಯೋಜನೆ ಬಗ್ಗೆ ಮಾತನಾಡುತ್ತಾರೆ. ಇವತ್ತು ಪ್ರಾಣ ಕಳೆದುಕೊಂಡ 11 ಜನರಿಗೆ ಯಾರು ಹೊಣೆ? ಇದೆ ನಮ್ಮ ಜ್ಞಾನೇಂದ್ರಣ್ಣ ಗೃಹ ಸಚಿವರಾಗಿದ್ದಾಗ ನಟ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ಮರಣ ಹೊಂದಿದರು.
ಆ ಸಂದರ್ಭದಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲಾಗಿತ್ತು. ಇಲ್ಲಿನ ಹಾಗೂ ರಾಜ್ಯದ ಕೆಲವು ನಾಯಕರು ಆರಗ ಜ್ಞಾನೇಂದ್ರ ರವರ ಬಗ್ಗೆ ಮಾತನಾಡುತ್ತಾರೆ
ಆದರೆ ಅಂತಹ ಯಾವುದೇ ಘಟನೆ ನಡೆಯದಂತೆ ನೋಡಿಕೊಂಡಿದ್ದರು. ಇಂದು ನಡೆದ ದುರಂತಕ್ಕೆ ಕಾಂಗ್ರೆಸ್ ಸರ್ಕಾರ ಉತ್ತರ ನೀಡಬೇಕು ಎಂದು ವಾಗ್ದಾಳಿ ನಡೆಸಿದರು.