ಕನ್ನಡ ನಾಡು ತಲೆ ತಗ್ಗಿಸುವಂತ ಕೆಲಸ ಸರ್ಕಾರ ಮಾಡಿದೆ - ಆರಗ ಜ್ಞಾನೇಂದ್ರ ವಾಗ್ದಾಳಿ Araga jnanendra

ಕನ್ನಡ ನಾಡು ತಲೆ ತಗ್ಗಿಸುವಂತ ಕೆಲಸ ಸರ್ಕಾರ ಮಾಡಿದೆ - ಆರಗ ಜ್ಞಾನೇಂದ್ರ ವಾಗ್ದಾಳಿ 

ಶಿವಮೊಗ್ಗ : ಜನರ ಭಾವನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ತಂತ್ರ, ಅದರಿಂದ ಈ ರೀತಿಯಾದ ಘಟನೆ ನಡೆದಿದೆ. ಇಡೀ ಕನ್ನಡ ನಾಡು ತಲೆ ತಗ್ಗಿಸುವಂತ ಕೆಲಸ ಸರ್ಕಾರ ಮಾಡಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ
ಅವರು ಕ್ರಿಕೆಟ್ ಅಷ್ಟೇ ಅಲ್ಲದೆ ಬೇರೆ ಕ್ರೀಡೆಯಲ್ಲಿ ಗೆದ್ದು ಸಾಧನೆ ಮಾಡಿದವರನ್ನು ನರೇಂದ್ರ ಮೋದಿಯವರು ತಮ್ಮ ಬಳಿಗೆ ಕರೆಸಿ ಸನ್ಮಾನ ಮಾಡಿದ್ದಾರೆ. ಇವರು ಸಹ ಹಾಗೆ ಮಾಡಬಹುದಿತ್ತಲ್ಲವೇ? ನಿನ್ನೆ ಯಾರಿಗೆ ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ವೇದಿಕೆ ಮೇಲೆ ಸಾವಿರಾರು ಮಂದಿ ನಿಂತಿದ್ದರು. ಒಟ್ಟಿನಲ್ಲಿ ಸರ್ಕಾರ ಸಂಪೂರ್ಣ ಅವ್ಯವಸ್ಥೆ ಮಾಡಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ ರು.

ಗೃಹಸಚಿವರು ಏನು ಮಾತನಾಡುವುದಿಲ್ಲ. ಅಷ್ಟೇ ಅಲ್ಲದೆ ಪೊಲೀಸರು ಸಹ ನಡೆದುಕೊಂಡ ರೀತಿ ಸರಿಯಲ್ಲ. ರಾಜಕೀಯ ಹಾಳಾಗಿ ಹೋಗಲಿ, ಜನರ ಪ್ರಾಣ ಉಳಿಸಬೇಕಾದ ನೀವು ಸಹ ತೆಪ್ಪಗಿದ್ರಿ, ಪೊಲೀಸ್ ಅಧಿಕಾರಿಗಳೇ ಸೆಲ್ಫಿ ತೆಗೆದುಕೊಳ್ಳಲು ಹೋಗುತ್ತಾರೆ, ನಿನ್ನೆ ಘಟನೆ ನೋಡಿದರೆ ಸರ್ಕಾರ ನೇ ಇಲ್ಲ ಪೊಲೀಸ್ ವ್ಯವಸ್ಥೆ ಯೇ ಸರಿಯಿಲ್ಲ ಎನ್ನುವಂತೆ ಇತ್ತು ಎಂದರು.

ನಾನು ಸಹ ಗೃಹಸಚಿವನ್ನಾಗಿ ಕೆಲಸ ನಿರ್ವಹಿಸಿದ್ದೇನೆ. ಪುನೀತ್ ರಾಜ್ ಕುಮಾರ್ ನಿಧಾನರಾದ ದಿನ ನಾನು ಸಾಗರದಲ್ಲಿ ಇದ್ದೆ. ವಿಷಯ ತಿಳಿಯುತ್ತಿದ್ದಂತೆ ನಾನು ಬೆಂಗಳೂರಿಗೆ ಬಂದಿದ್ದೆ. ಅಧಿಕಾರಿಗಳ ಜೊತೆಗೆ ಚರ್ಚಿಸಿ ಕೇವಲ ಎರಡು ಗಂಟೆಯಲ್ಲಿ ಬಂದೋಬಸ್ತ್ ಮಾಡಿದ್ದೆವು. ರಾಜ್ ಕುಮಾರ್ ನಿಧಾನರಾದ ಸಂದರ್ಭ ದಲ್ಲಿ ಯಾವ ಸ್ಥಳದಲ್ಲಿ ಗಲಭೆ ಉಂಟಾಗಿತ್ತೋ ಅಲ್ಲಿ ಸಹ ಬಂದೋಬಸ್ತ್ ಮಾಡಿದ್ದೆವು.ಅಧಿಕಾರಿಗಳ ಜೊತೆಗೆ ಚರ್ಚಿಸಿ ಕಾರ್ಯಕ್ರಮ ನಡೆಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ.  ದುರ್ದೈವದ ಸಂಗತಿ ಏನೆಂದರೆ ಆಟಗಾರ ರಿಗೆ ಸನ್ಮಾನ ಮಾಡುವ ವೇಳೆ ಅಲ್ಲಿ ಸೇರಿದ್ದ ಜನರನ್ನು ನೋಡಿದರೆ ಆತಂಕ ವ್ಯಕ್ತವಾಗುತ್ತಿತ್ತು. ವೇದಿಕೆ ಮೇಲೆಸಾವಿರಾರು ಜನ ಇದ್ದರು ಅದನ್ನು ವೇದಿಕೆ ಎಂದು ಕರೆಯುತ್ತಾರ? ಎಂದು ಪ್ರೆಶ್ನೆ ಮಾಡಿದರು.

ಕ್ರೀಡಾಪಟು ಗಳಿಗೆ ಸನ್ಮಾನ ಮಾಡಿದರೋ?  ಅವಮಾನ ಮಾಡಿದರೋ? ಗೊತ್ತಾಗಲಿಲ್ಲ. ಮಂತ್ರಿಗಳ ಮಕ್ಕಳು, ಮೊಮ್ಮಕ್ಕಳು, ಪತ್ನಿ ಕರೆದುಕೊಂಡು ಬಂದು ಆಟಗಾರರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವ ಕೆಲಸ ಮಾಡಿಸುತ್ತಿದ್ದರು.. ಇಡೀ ಕರ್ನಾಟಕ್ಕೆ ತಿಳಿದಿತ್ತು ಅಷ್ಟೊಂದು ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂದು, ಸರ್ಕಾರಕ್ಕೆ ಗೊತ್ತಿಲ್ಲ, ಇದ್ದಕ್ಕಿದ್ದ ಹಾಗೆ ಆಯಿತು ಎನ್ನುವುದು ಸರ್ಕಾರದ ನೀಚತನ ದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Previous Post Next Post