ಬಾರಿ ಮಳೆಯಿಂದ ಧರೆ ಕುಸಿದು ನೆಲಕ್ಕುರುಳಿದ 30 ಕ್ಕೂ ಹೆಚ್ಚು ಅಡಿಕೆ ಮರ..! Tuduru

ಬಾರಿ ಮಳೆಯಿಂದ ಧರೆ ಕುಸಿದು ನೆಲಕ್ಕುರುಳಿದ 30 ಕ್ಕೂ ಹೆಚ್ಚು ಅಡಿಕೆ ಮರ..!

ತೀರ್ಥಹಳ್ಳಿ: ತಾಲೂಕಿನಲ್ಲಿ ಮೃಗಶಿರ ಮಳೆಯ ಅಬ್ಬರ ಹೆಚ್ಚಾಗಿದ್ದು ಮಳೆಯಿಂದ ಹಲವಾರು ಅನಾಹುತಗಳು ಸಂಭವಿಸಿವೆ. ಅದರಂತೆ ಧರೆ ಕುಸಿದು ಅಡಿಕೆ ಮರ ಬಿದ್ದ ಘಟನೆ ತೂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ತೂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮೂಡ್ಲು ಎಂಬ ಗ್ರಾಮದ ಮಂಜುನಾಥ್ ಶೆಟ್ಟಿ ಎಂಬುವರ ತೋಟದ ಹಿಂಭಾಗ ಹಳ್ಳದ ನೀರು ಹರಿಯುತ್ತಿದ್ದು ಹಳ್ಳದ ನೀರಿನ ರಭಸಕ್ಕೆ ಧರೆ ಕುಸಿದು 30 ಕ್ಕೂ ಹೆಚ್ಚು ಅಡಿಕೆ ಮರ ನೆಲಕ್ಕೆ ಉರುಳಿದೆ. ಪ್ರತಿ ವರ್ಷದ ಮಳೆಗಾಲದಲ್ಲಿ ಧರೆ ಕುಸಿಯುತ್ತಿದೆ. ಆದರೆ ಈ ಬಗ್ಗೆ ಯಾರು ಗಮನವಹಿಸುತ್ತಿಲ್ಲ
ಈ ಬಾರಿ 30 ಅಡಿಕೆ ಮರ ನೆಲಕ್ಕೆ ಉರುಳಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಸ್ಥಳಕ್ಕೆ ಗ್ರಾಮಪಂಚಾಯಿತಿ ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




Previous Post Next Post