ಎರಡು ಕಾರುಗಳ ನಡುವೆ ಡಿಕ್ಕಿ, ನವವಧು ಸೇರಿ ಮೂವರಿಗೆ ಗಾಯ..!
ತೀರ್ಥಹಳ್ಳಿ: ಕುಟುಂಬದೊಂದಿಗೆ ನವದಂಪತಿಗಳು ದೇವಸ್ಥಾನಕ್ಕೆ ತೆರಳುತ್ತಿದ್ದ ಕಾರಿಗೆ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನವವಧು ಸೇರಿ ಮೂವರು ಮಹಿಳೆಯರು ಗಾಯಗೊಂಡಿರುವ ಘಟನೆ ಅರೆಕಲ್ ಬಳಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಅರೇಕಲ್ ಕ್ರಾಸ್ ಬಳಿ ಘಟನೆ ಸಂಭವಿಸಿದ್ದು ನವವಧು, ಅವರ ತಾಯಿ, ಅಜ್ಜಿ ಗಾಯಗೊಂಡಿದ್ದಾರೆ.
ಕುಟುಂಬದವರ ಜೊತೆಗೆ ಇತ್ತೀಚಿಗೆ ಮದುವೆ ಆಗಿದ್ದ ನವದಂಪತಿಗಳು ಮಂದಾರ್ತಿಗೆ ತೆರಳುತ್ತಿದ್ದರು. ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags:
ಅಪಘಾತ ಸುದ್ದಿ
