ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಪರ ಪೋಸ್ಟ್- ಶಿವಮೊಗ್ಗದಲ್ಲಿ ಕೇಸ್ ದಾಖಲು..!
ಶಿವಮೊಗ್ಗ : ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯಿತ್ತಿದೆ. ಯುದ್ಧ ಆರಂಭವಾದ ಮೊದಲ ದಿನ ಮೇ.7 ರ ಬೆಳಗಿನ ಜಾವ ಭಾರತ ಸೇನೆ ಪಾಕ್ ನ ಉಗ್ರರ ನೆಲೆಗಳ ಮೇಲೆ ಬಾಂಬ್ ಹಾಕಿದ ವಿಡಿಯೋವೊಂದಕ್ಕೆ ಶಿವಮೊಗ್ಗದ ಯುವಕನೋರ್ವ ಬೆಂಬಲಿಸಿ ವಿಡಿಯೋ ತುಣಕನ್ನ ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಂಡಿದ್ದು ಈ ಸಂಬಂಧ ಶಿವಮೊಗ್ಗದಲ್ಲಿ ದೂರು ದಾಖಲಿಸಲಾಗಿದೆ.
ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ಮೇ. 7 ರಂದು ಭಾರತೀಯ ಸೇನೆ ಬಾಂಬ್ ಹಾಕಿದ ಘಟನೆ ವಿಡಿಯೋ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿದಾಡಿತ್ತು. ಉಗ್ರರ ಬೇಟೆ ಆಡಿದ ಯೋಜನೆಗೆ ಭಾರತ ಆಪರೇಷನ್ ಸಿಂದೂರ ಎಂಬ ಹೆಸರಿಟ್ಟಿದ್ದರು.
ಇದರ ಒಂದು ವಿಡಿಯೋವೊಂದನ್ನು ಶಿವಮೊಗ್ಗದ ನಿವಾಸಿಯೋರ್ವ ತನ್ನ ವಾಟ್ಸಪ್ ಸ್ಟೇಟಸ್ ಗೆ ಅಪಲೋಡ್ ಮಾಡಿ ಇಂಗ್ಲೀಷ್ ನಲ್ಲಿ india attack on Pakistan Ya Khuda Ahlebait (a) Kay Sadky Har Shian-e Ali (a) ki hifazar Farma ಎಂಬ ಪದವನ್ನ ಹಾಕಿಕೊಂಡಿದ್ದನು.
ಭಾರತ ದೇಶದ ಪ್ರಜೆಯಾಗಿ, ಪಾಕಿಸ್ತಾನದ ಪರವಾಗಿ ದೇವರಲ್ಲಿ ಬೇಡಿಕೊಂಡಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಇದನ್ನ ಉರ್ದು ಮತ್ತು ಅರಬಿಕ್ ನ ತಜ್ಞರು ಕನ್ನಡಕ್ಕೆ ಅನುವಾದಿಸಿದ್ದು, ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತದೆ. ಓ ಅಲ್ಲಾಹು, ಅಹ್ಲುಲ್ ಬೈತ್ (ಅ) ರವರ ಗೌರವವನ್ನು ಮತ್ತು ಪ್ರವಾದಿ (ಸ) ರವರ ಗೌರವವನ್ನು ರಕ್ಷಿಸು! ಎಂದು ಬೇಡಿಕೊಂಡಿದ್ದಾನೆ ಎಂದು ಅರ್ಥೈಸಲಾಗಿದೆ. ಇದರ ಆಧಾರದ ಮೇಲೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
