ತೀರ್ಥಹಳ್ಳಿಯಲ್ಲಿ ಪೌರ ಸೇವಾ ನೌಕರರ ಧರಣಿ - ಬೇಡಿಕೆ ಈಡೇರಿಸದಿದ್ದರೆ ನಾಳೆಯಿಂದ ನೀರು ಬಂದ್ !! Thirthahalli protest

ತೀರ್ಥಹಳ್ಳಿಯಲ್ಲಿ ಪೌರ ಸೇವಾ ನೌಕರರ ಧರಣಿ - ಬೇಡಿಕೆ ಈಡೇರಿಸದಿದ್ದರೆ ನಾಳೆಯಿಂದ ನೀರು ಬಂದ್ !!

ತೀರ್ಥಹಳ್ಳಿ:  ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘವು ಉಲ್ಲೇಖದ ಸರ್ಕಾರದ ಆದೇಶ ಮತ ಮಾನ್ಯತೆ ಪಡೆದ ಸಂಘವಾಗಿದ್ದು, ಮಾನ್ಯತೆ ಪಡೆದ ದಿನಾಂಕದಿಂದ ಈವರೆಗೂ ಸಂಘವು ಯಾವುದೇ ಮುಷ್ಕರಗಳನ್ನು ಕೈಗೊಳ್ಳದೇ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿ ನೌಕರರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಾ, ಸಂಘವು ಸಕ್ರೀಯವಾಗಿರುತ್ತದೆ.

ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಹಲವಾರು ಬೇಡಿಕೆಗಳು ಸುಮಾರು ದಶಕಗಳಿಂದ ಬಾಕಿ ಉಳಿದಿದ್ದು, ಸದರಿ ಬೇಡಿಕೆಗಳನ್ನು ಈವರೆಗೂ ಈಡೇರಿಸಿರುವುದಿಲ್ಲ. ಈ ಕುರಿತಂತೆ ಸರ್ಕಾರಕ್ಕೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗಿರುವುದಿಲ್ಲ.
ದಿನಾಂಕ : 12-04-2025 ರಂದು ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ನಡೆದ ಸಂಘದ ರಾಜ್ಯ ಪರಿಷತ್ ಸಭೆಯಲ್ಲಿ ಪೌರಸವಾ ನೌಕರರ ಬೇಡಿಕೆಗಳ ಬಗ್ಗೆ 1 ತಿಂಗಳ ಮುಷ್ಕರ ನೋಟಿಸನ್ನು ಸರ್ಕಾರಕ್ಕೆ ಸಲ್ಲಿಸಲು ಸದರಿ ಅವಧಿಯೊಳಗೆ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ
ಅನಿರ್ಧಿಷ್ಠಾವಧಿ ಮುಷ್ಕರ ಕೈಗೊಳ್ಳಲು ನಿರ್ಣಯಿಸಲಾಗಿರುತ್ತದೆ.

ಈಗಾಗಲೇ ಮುಷ್ಕರ ನೋಟೀಸನ್ನು ಸಹ ನೀಡಿದ್ದು, ಒಂದು ತಿಂಗಳ ಅವಧಿಯು ಮುಗಿದಿರುತ್ತದೆ. ಆದರೆ ಈವರೆಗೂ ಸಂಘಧ ಪದಾಧಿಕಾರಿಗಳ ಸಭೆ ಕರೆಯದೇ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ದಿನಾಂಕ : 30-05-2025 ರಿಂದ ರಾಜ್ಯದ್ಯಂತ ಸ್ವಚ್ಛತೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಲಾಗುವುದು. ಮತ್ತು ಅಷ್ಟೇ ಅಲ್ಲದೆ ದಿನಾಂಕ : 02-06-2025 ರಿಂದ ನೀರು ಸರಬರಾಜು ಸಹ ಸ್ಥಗಿತಗೊಳಿಸಿ ಮುಷ್ಕರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪೌರಸೇವಾ ನೌಕರರ ಬೇಡಿಕೆ ಏನು?

1. ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೊಂದ ಸವಲತ್ತುಗಳನ್ನು ಪೌರಸೇವಾ ನೌಕರರಿಗೆ ಪ್ರತ್ಯೇಕ ಆದೇಶವಿಲ್ಲದೇ ವಿಸ್ತರಿಸುವ ಬಗ್ಗೆ
2 ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ / ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಇರುವ ನೌಕರರನ್ನು ಸಕ್ರಮಾತಿಗೊಳಿಸುವ ಬಗ್ಗೆ
3. ನಗರ ಸಭೆಗಳಲ್ಲಿ ಶೇಕಡ 1% ರಷ್ಟು ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ಅಡಿ ನೇಮಕಾತಿ ಮಾಡುವ ಬಗ್ಗೆ
4, 2022ನೇ ಸಾಲಿನ ವಿಶೇಷ ನೇಮಕಾತಿ ಅಡಿ ಆಯ್ಕೆಯಾದ ಪೌರಕಾರ್ಮಿಕರು / ಲೋಡರ್‌ಗಳಿಗೆ ಎಸ್.ಎಫ್.ಸಿ ವೇತನ ನಿಧಿಯಿಂದ ವೇತನ ಪಾವತಿಸುವ ಬಗ್ಗೆ
5. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರಗಳನ್ನು ವಿಶೇಷ ನೇಮಕಾತಿ ಅಡಿ ಪರಿಗಣಿಸುವ ಬಗ್ಗೆ
6. ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ | ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ
7, ಐಟಿ ಸಿಬ್ಬಂದಿ / ಅಕೌಂಟ್ ಕನ್ಸಲ್‌ಟಂಟ್ / ಕಂಪ್ಯೂಟರ್ ಆಪರೇಟರ್ / ವಾಹನ ಚಾಲಕ / ಸ್ಯಾನಿಟರಿ ಸೂಪರ್‌ವೈಜ‌ರ್ ಹಾಗೂ ಇತರೆ ವೃಂದದ ನೌಕರರನ್ನು ಪೌರ ಸೇವ ನೌಕರರೆಂದು ಪರಿಗಣಿಸಿ ವೀಲಿನಾತಿಗೊಳಿಸುವ ಬಗ್ಗೆ
ಬೇಡಿಕೆ ಇಡಲಾಗಿದೆ.




Previous Post Next Post